ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಸೆ.27ರಿಂದ ಅ.3ರವರೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರತಿದಿನ ಸಂಜೆ 6ರಿಂದ ರಾತ್ರಿ 10ಗಂಟೆಯವರೆಗೆ ಯುವ ದಸರಾ ಆಯೋಜಿಸಲಾಗಿದೆ.
ಈ ವಿಷಯವನ್ನು ಯುವ ದಸರಾ ಉಪಸಮಿತಿ ವಿಶೇಷಾಧಿಕಾರಿಯೂ ಆದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಸೆ.27ರಂದು ಸಂಜೆ 6ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಯುವ ದಸರಾಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಗಮಿಸಲಿದ್ದು, ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆವಹಿಸಲಿದ್ದಾರೆ.
ಅಂದು ಸಂಜೆ 7.30ರಿಂದ 8ರವರೆಗೆ ಮೈಸೂರಿನ ಶ್ರೀಧರ್ ಜೈನ್ ತಂಡ, 8ರಿಂದ 9ರವರೆಗೆ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಮತ್ತು 9ರಿಂದ 10ರವರೆಗೆ ಗಾಯಕಿ ಮಂಗ್ಲಿ ಬಾಯಿ ಕಾರ್ಯಕ್ರಮ ನೀಡಲಿದ್ದಾರೆಂದು ತಿಳಿಸಿದರು.
ಸೆ.28ರಂದು ಸಂಜೆ 6ರಿಂದ 6.30ರವರೆಗೆ ಯುವ ಸಂಭ್ರಮ ವಿಜೇತರಿಂದ , 6.30ರಿಂದ 7ರವರೆಗೆ ಸ್ಥಳೀಯ ನೃತ್ಯ ತಂಡಗಳು, ಸಂಜೆ 7ರಿಂದ 10ರವರೆಗೆ ಅಪ್ಪುನಮನ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಗುರುಕಿರಣ್, ವಿಜಯ್ ಪ್ರಕಾಶ್ ಮತ್ತು ಕುನಾಲ್ ಗಾಂಜಾವಾಲ ಕಾರ್ಯಕ್ರಮ ನೀಡಲಿದ್ದಾರೆ.
ಸೆ.29ರಂದು ಸಂಜೆ 6ರಿಂದ 6.30ರವರೆಗೆ ಯುವ ಸಂಭ್ರಮ ವಿಜೇತರಿಂದ, ಸಂಜೆ 6.30ರಿಂದ 7 ಸ್ಥಳೀಯ ನೃತ್ಯ ತಂಡಗಳು, 7ರಿಂದ 7.20ರವರೆಗೆ ಲೇಸರ್ ಷೋ ಇರಲಿದೆ ಎಂದು ಹೇಳಿದರು.
ಸಂಜೆ 7.30ರಿಂದ 10ರವರೆಗೆ ಕನ್ನಿಕಾ ಕಪೂರ್ ಮತ್ತು ತಂಡ ಅಸೆಂಟ್ ಕಾರ್ಯಕ್ರಮ ನೀಡಲಿದ್ದಾರೆ.
ಸೆ.30ರಂದು ಸಂಜೆ 6ರಿಂದ 6.30 ಯುವ ಸಂಭ್ರಮ ವಿಜೇತರಿಂದ, 6.30ರಿಂದ 7 ಸ್ಥಳೀಯ ನೃತ್ಯ ತಂಡಗಳು, ಸಂಜೆ 7.30ರಿಂದ ರಾತ್ರಿ 10ರವರೆಗೆ ಸ್ಯಾಂಡಲ್ ವುಡ್ ನೈಟ್ ನಡೆಯಲಿದೆ.
ಅ.1ರಂದು ಸಂಜೆ6ರಿಂದ 6.30 ಯುವ ಸಂಭ್ರಮ ವಿಜೇತರಿಂದ , ಸಂಜೆ 6.30ರಿಂದ ನೃತ್ಯ ರೂಪಕ, ರಾತ್ರಿ 8ರಿಂದ 10ರವರೆಗೆ ಡಾ.ಶಮಿತಾ ಮಲ್ನಾಡ್ ಕಾರ್ಯಕ್ರಮ ಇದೆ.
ಅ.2ರಂದು ಸಂಜೆ 6ರಿಂದ 6.30ಯುವ ಸಂಭ್ರಮ ವಿಜೇತರಿಂದ, ಸಂಜೆ 6.30ರಿಂದ 7ರವರೆಗೆ ಪವನ್ ಡ್ಯಾನ್ಸರ್ಸ್, ಸಂಜೆ 7ರಿಂದ 8ರವರೆಗೆ ಹರ್ಷಿಕಾ ಪೂಣಚ್ಚ ಮತ್ತು ವಿಜಯ ರಾಘವೇಂದ್ರ , ರಾತ್ರಿ 8ರಿಂದ 10ರವರೆಗೆ ಅಮಿತ್ ತ್ರಿವೇದಿ ಕಾರ್ಯಕ್ರಮವಿರಲಿದೆ.
ಅ.3ರಂದು ಸಂಜೆ 6ರಿಂದ 6.30 ಯುವ ಸಂಭ್ರಮ ವಿಜೇತರಿಂದ, ಸಂಜೆ 6.30ರಿಂದ 7ರವರೆಗೆ ಸುಪ್ರಿಯಾ ರಾಮ್ ಮತ್ತು ಮಹಿಳಾ ಬ್ಯಾಂಡ್ ತಂಡ, ಸಂಜೆ 7.30ರಿಂದ 8ರವರೆಗೆ ಫ್ಯಾಷನ್ ಷೋ. ರಾತ್ರಿ 8ರಿಂದ 10ರವರೆಗೆ ಸುನಿಧಿ ಚವ್ಹಾಣ್ ಕಾರ್ಯಕ್ರಮ ನೀಡಲಿದ್ದಾರೆ ಎಂದು ಚೇತನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಸಮಿತಿಯ ಕಾರ್ಯಾಧ್ಯಕ್ಷ ವೆಂಕಟರಾಜು ಮತ್ತು ನಿಂಗರಾಜು ಇದ್ದರು.

