ಬೆಂಗಳೂರು: ವಿಶ್ವ ಯುದ್ಧ ನಡೆದ ವೇಳೆ ಇಸ್ರೇಲ್ ನ ಹೈಫ ನಗರ ಯುದ್ದದಲ್ಲಿ ಕನ್ನಡಿಗರ ಸಾಹಸ ದೈರ್ಯ ಇತರೆ ದೇಶಗಳಿಗೂ ಮಾದರಿ ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಅದರಲ್ಲೂ ಮೈಸೂರಿನ ಅಶ್ವದಳದ ಶೌರ್ಯ, ಸಾಹಸ ಅವಿಸ್ಮರಣೀಯವಾಗಿದ್ದು ಇದನ್ನು ಪಠ್ಯದಲ್ಲಿ ಸೇರಿಸಬೇಕಾದ ಅಗತ್ಯವಿದೆ ಎಂದು ಸಚಿವರು ತಿಳಿಸಿದರು.
ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಹೈಫ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ಭಾರತದ ಮಿತ್ರ ದೇಶ ಇಸ್ರೇಲ್ ಉಗಮದಲ್ಲಿ ಭಾರತೀಯರ ಅದರಲ್ಲಿಯೂ, ಮೈಸೂರು ಜನತೆಯ ಪಾತ್ರ ಅವಿಸ್ಮರಣೀಯ ಎಂದು ಕೊಂಡಾಡಿದರು.
ಇಸ್ರೇಲ್ ಇಡೀ ವಿಶ್ವದಲ್ಲಿ ಅತ್ಯಂತ ಬಲಾಢ್ಯ ಹಾಗೂ ಶಕ್ತಿಶಾಲಿ ದೇಶವಾಗಿ ಹೊರಹೊಮ್ಮಿದೆ. ಇದಕ್ಕೆ ಕಾರಣ ಜನರ ಅದಮ್ಯ ಸ್ವಾಭಿಮಾನ ಹಾಗೂ ದೇಶಭಕ್ತಿ.ಇದು ಇಡೀ ವಿಶ್ವಕ್ಕೇ ಮಾದರಿ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
1918 ರಲ್ಲಿ ಇಸ್ರೇಲ್ ನ ಹೈಫಾ ನಗರ ಹೋರಾಟದಲ್ಲಿ ಅಂದಿನ ಮೈಸೂರು ಸಂಸ್ಥಾನದ ಅಶ್ವದಳದ ಸೈನಿಕರ ಧೈರ್ಯ . ಸಾಹಸ ಎಂದೆಂದಿಗೂ ಸ್ಮರಣೀಯ, ಅವರನ್ನು ನೆನಸಿಕೊಳ್ಳುವ ಕಾರ್ಯಕ್ರಮ ರೂಪಿಸಿರುವುದು ಸ್ತುತ್ಯಾರ್ಹ ಎಂದರು.
ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು, ಯುದ್ಧದಲ್ಲಿ ಭಾಗವಹಿಸಿದ್ದ ಯೋಧರ ಕುಟುಂಬದ ಸದಸ್ಯರು ಹಾಗೂ ಇಸ್ರೇಲ್ ದೇಶದ ಕಾನ್ಸಲೆಟ್ ಜನರಲ್ ಟಾಮಿ ಬೆನ್ ಹೈಮ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

