ದಸರಾ ವೀಕ್ಷಣೆಗೆ ಗೋಲ್ಡ್ ಕಾರ್ಡ್ ಬಿಡುಗಡೆ

ಮೈಸೂರು: ನಾಡ ಹಬ್ಬ ದಸರಾ 2022 ವೀಕ್ಷಣೆಗಾಗಿ ದೇಶವಿದೇಶ ಪ್ರವಾಸಿಗರು/ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾಡಳಿತ ಗೋಲ್ಡ್ ಕಾರ್ಡ್ ಸೌಲಭ್ಯವನ್ನು ಬಿಡುಗಡೆ ಮಾಡಿದೆ.

ಗೋಲ್ಡ್ ಕಾರ್ಡ್ ಲಭ್ಯತೆ ಅನುಗುಣವಾಗಿ ಆನ್ ಲೈನ್ ಮೂಲಕ http://www.mysoredasara.gov.in ಮತ್ತು www.mysoredasara.gov.in ವೆಬ್ ಸೈಟ್ ನಲ್ಲಿ ಖರೀದಿಸಬಹುದಾಗಿದೆ.

1 ಗೋಲ್ಡ್ ಕಾರ್ಡ್ಗೆ 4999/- ರೂ. ಗಳನ್ನು ನಿಗಧಿಗೊಳಿಸಲಾಗಿದೆ.

ಒಮ್ಮೆ ಆನ್ ಲೈನ್ ಪಾವತಿ ದೃಢಿಕೃರಿಸಿದ ನಂತರ ಪ್ರವಾಸಿಗರು ಗೋಲ್ಡ್ ಕಾರ್ಡ್ ಅನ್ನು ಸೆ.29 ರಿಂದ ಕೆ.ಎಸ್.ಡಿ.ಟಿ.ಸಿ ಮಯೂರ ಹೋಟೆಲ್ ಹತ್ತಿರ ಬೆಳಿಗ್ಗೆ 11ರಿಂದ ಸಂಜೆ 5.30 ರವರೆಗೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಗೋಲ್ಡ್ ಕಾರ್ಡ್ ಪಡೆದುಕೊಳ್ಳುವಾಗ ಪಾವತಿ ನಂತರ ಸ್ವೀಕೃತವಾಗುವ ಇಮೇಲ್ ಪ್ರತಿ ಹಾಗೂ ಯಾವುದಾದರೂ ಒಂದು .ಡಿ.ಪ್ರೂಫ್ ಅನ್ನು ಹಾಜರುಪಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಗೋಲ್ಡ್ ಕಾರ್ಡ್ ಪಡೆವುದರಿಂದ ದಸರಾ ಮೆರಚಣಿಗೆಜಂಬೂ ಸವಾರಿ ವೀಕ್ಷಣೆಗೆ ಅವಕಾಶ, ಪಂಜಿನ ಕವಾಯತು ಬನ್ನಿಮಂಟಪ ವೀಕ್ಷಣೆಗೆ ಅವಕಾಶ ಹಾಗೂ ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡೇಶ್ವರಿ ದೇವಸ್ಥಾನ, ಫಲಪುಪ್ಪ ಪ್ರದರ್ಶನ, ದಸರಾ ವಸ್ತು ಪ್ರದರ್ಶನ, ಸೇಂಟ್ ಫಿಲೋಮಿನ ಚರ್ಚ್, ರೈಲ್ವೆ ಮ್ಯೂಸಿಯಂ, ಕೃಷ್ಣರಾಜ ಸಾಗರ ಅಣೆಕಟ್ಟು ಪ್ರವಾಸಿ ತಾಣಗಳಿಗೆ ಉಚಿತವಾಗಿ ಒಮ್ಮೆ ಮಾತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.