ಚುರುಮುರಿ ಸವಿದ ಎಸ್.ಟಿ.ಎಸ್

ಮೈಸೂರು: ದಸರಾ ಆಹಾರ ಮೇಳಕ್ಕೆ ಜನತೆ ದಾಂಗುಡಿ ಇಡುತ್ತಿದ್ದಾರೆ.ಇದಕ್ಕೆ ಸಚಿವರೂ ಸಾಥ್ ನೀಡಿದುದು ವಿಶೇಷ.
ಹೌದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ರಾತ್ರಿ ಆಹಾರ ಮೇಳಕ್ಕೆ ಭೇಟಿ ನೀಡಿದರು.
ಮಳಿಗೆಗಳ ಮಾಲೀಕರು ಹಾಗೂ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿ ಮೇಳದಲ್ಲಿ ಕೈಗೊಂಡಿರುವ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ‌
ಯಾವುದೇ ಸಮಸ್ಯೆ, ಅನಾನುಕೂಲ ಉಂಟಾದರೆ ಕೂಡಲೇ ಸಂಪರ್ಕಿಸುವಂತೆ ತಿಳಿಸಿದರು.
ಅಲ್ಲದೆ ಮೇಳದಲ್ಲಿ ಹಣ ನೀಡಿಯೇ ಚುರುಮುರಿ, ಐಸ್ ಕ್ರೀಮ್, ಕೇಕ್ ಸವಿದರು.
ಮೇಯರ್ ಶಿವಕುಮಾರ್, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಶ್ರೀವತ್ಸ ಸೇರಿದಂತೆ ಹಲವು ಮುಖಂಡರು ಸೋಮಶೇಖರ್ ಗೆ ಸಾಥ್ ನೀಡಿದರು.