ವಿದ್ಯೆಯಷ್ಟೇ ಜೀವನಕ್ಕೆ ಯೋಗ ಅಗತ್ಯ:ಪ್ರತಾಪ್ ಸಿಂಹ

ಮೈಸೂರು: ವಿದ್ಯೆ ಜೀವನಕ್ಕೆ ಎಷ್ಟು ಅಗತ್ಯವೋ ಆರೋಗ್ಯಯುತ ಬದುಕಿಗೆ ಯೋಗವೂ ತುಂಬಾ ಮುಖ್ಯ ಎಂದು   ಸಂಸದ  ಪ್ರತಾಪ್ ಸಿಂಹ ತಿಳಿಸಿದರು.
ಅರಮನೆ ಆವರಣದ ಅಂಬಾವಿಲಾಸ ಅರಮನೆಯ ಮುಂಭಾಗದಲ್ಲಿ  ಹಮ್ಮಿಕೊಳ್ಳಲಾಗಿದ್ದ ಯೋಗ ಸರಪಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೋಗ ಕಾರ್ಯಕ್ರಮವಾಗಿದೆ. ಕೇವಲ ಜೂನ್ 21 ಕ್ಕೆ ಮಾತ್ರ ಸೀಮಿತವಾಗದೆ ಪ್ರತಿನಿತ್ಯ ನಮ್ಮ ಜೀವನದಲ್ಲಿ ಯೋಗ ಒಂದು ಭಾಗವಾಗಲಿ ಎಂದು ತಿಳಿಸಿದರು.
ಜಿಎಸ್ ಎಸ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ  ಶ್ರೀಹರಿ ಮಾತನಾಡಿ ಯೋಗ ಕಾರ್ಯಕ್ರಮ 2015 ರಿಂದಲೂ ನಡೆಯುತ್ತಿದೆ. ಯೋಗವನ್ನು  ಹೆಚ್ಚು ಹೆಚ್ಚು  ಪ್ರಚಾರಮಾಡಬೇಕು ಎಂದು ಕೋರಿದರು
ಹೆಚ್ಚು ಯೋಗ ಶಾಲೆಗಳು ಮೈಸೂರಿನಲ್ಲಿ  ತೆರೆಯಬೇಕು ಇಲ್ಲಿನ ಪ್ರತಿ ಶಾಲೆಯಲ್ಲೂ ಯೋಗ ಮಾಡುವ ಹಾಗೆ ಆಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಪುಷ್ಪ,ಯೋಗ ದಸರಾ ಉಪಸಮಿತಿಯ ಅಧ್ಯಕ್ಷ  ಬಾಲಕೃಷ್ಣ,  ವಿರೂಪಾಕ್ಷ ಬೆಳವಾಡಿ,  ಕೆ.ವೈ.ಮಂಜು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.