ಮೈ ಸೂರು: ಈ ಬಾರಿಯು ದಸರಾ ಮಹೋತ್ಸವದಲ್ಲಿ ಭಾಗವಹಿಸಿ ಜಂಬೂ ಸವಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಅಭಿಮನ್ಯು ನೇತೃತ್ವದ ಗಜಪಡೆಗೆ ಪ್ರೀತಿಯ ಬೀಳ್ಕೊಡುಗೆ ನೀಡಲಾಯಿತು.
ಎರಡು ತಿಂಗಳಿಂದ ಅರಮನೆಯಲ್ಲಿ ಬೀಡು ಬಿಟ್ಟಿದ್ದ ಆನೆಗಳನ್ನ ಸ್ವ ಸ್ಥಳಕ್ಕೆ ಕಳಿಸಿಕೊಡಲಾಯಿತು.

ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳನ್ನು ನೆರವೇರಿಸಿ ಬಳಿಕ ಗಜಪಡೆಯನ್ನು ಆತ್ಮೀಯವಾಗಿ ಕಳುಹಿಸಿಕೊಡಲಾಯಿತು.
ಅರಮನೆಗೆ ಬಂದು ಗಂಡು ಮರಿಗೆ ಜನ್ಮ ನೀಡಿದ್ದ ಲಕ್ಷ್ಮಿ ಮತ್ತು ಮರಿಯಾನೆಯನ್ನು ಕೂಡಾ ಬೀಳ್ಕೊಡಲು ನಿರ್ಧರಿಸಲಾಗಿದೆ.
ವೈದ್ಯರು ಮತ್ತು ನಮ್ಮ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕಳಿಸುವ ನಿರ್ಧಾರ ಮಾಡಲಾಗಿದೆ ಎಂದು ಡಿಸಿಎಫ್ ಕರಿಕಾಳನ್ ಈ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಆನೆಗಳನ್ನು ಲಾರಿಗೆ ಹತ್ತಿಸಲು ಮುಂದಾದಾಗ ಶ್ರೀರಾಮ ಆನೆ ನಕರಾ ಮಾಡದೆ.ಮಾವುತರು ಕಾವಾಡಿಗಳು ಇತರೆ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಶ್ರೀರಾಮ ಲಾರಿ ಹತ್ತಲು ಇಷ್ಟಪಡದೆ ತಪ್ಪಿಸಿಕೊಳ್ಳುತ್ತಲೇ ಇದ್ದ.
ಬಹಳ ಸಮಯದವರೆಗೂ ಎಲ್ಲರನ್ನು ಆಟವಡಿಸಿದ ಶ್ರೀರಾಮನ ಮನವೊಲಿಸಿ ಲಾರಿಹತ್ತಿಸಲಾಯಿತು.
ಇದುಬರೆಗೂ ಭೂರಿ ಭೋಜನ ಸವಿದಿದ್ದರಿಂದಲೋ ಅಥವಾ ಅರಮನೆ ಪರಿಸರಕ್ಕೆ ಒಗ್ಗಿಕೊಂಡಿದ್ದರಿಂದಲೋ ಶ್ರೀರಾಮ ಕಾಡಿಗೆ ಹೋಗಲು ನಕರಾ ಮಾಡಿದ.
ಶ್ರೀರಾಮ ಹತ್ತದೆ ಉಳಿದ ಆನೆಗಳನ್ನು ಲಾರಿಗೆ ಹತ್ತಿಸಲಾಗದೆ ಮಾವುತರು ಪರದಾಡಬೇಕಾಯಿತು.

