ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಡೆದ ರಥೋತ್ಸವದಲ್ಲಿ ಭಕ್ತರು ಸಂಭ್ರಮ,ಭಕ್ತಿ ಭಾವದಿಂದ ಪಾಲ್ಗೊಂಡು ದೇವಿಗೆ ನಮನ ಸಲ್ಲಿಸಿದರು.
ದಸರಾ ಮುಗಿದ ನಾಲ್ಕು ದಿನಗಳ ನಂತರ ನಡೆಯುವ ಅದ್ದೂರಿ ರಥೋತ್ಸವವನ್ನ ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.
ಬೆಳಿಗ್ಗೆ 7.50 ರಿಂದ 8.10 ನಿಮಿಷದಲ್ಲಿ ಸಲ್ಲುವ ಶುಭಲಗ್ನದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಹಗ್ಗ ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಶಾಸಕರಾದ ಜಿ.ಟಿ.ದೇವೇಗೌಡ,ರಾಮದಾಸ್,ನಾಗೇಂದ್ರ ಸಾಥ್ ನೀಡಿದರು.
ಇದಕ್ಕೂ ಮುನ್ನ ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ದೇವಾಲಯದ ಒಂದು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಪ್ರದಕ್ಷಿಣೆಯಲ್ಲಿ ಯದುವೀರ್ ಸಹ ತೆರಳಿದರು.
ದೇವಾಲಯದ ಒಳಗೆ ರಾಜಮಾತೆ ಪ್ರಮೋದ ದೇವಿ ಒಡೆಯರ್,ಯದುವೀವರ್ ಪತ್ನಿ ತ್ರಿಶಿಕಾ ಒಡೆಯರ್ ವಿಶೇಷ ಪೂಜೆ ಸಲ್ಲಿಸಿದರು.
ಎರಡು ವರ್ಷಗಳ ನಂತರ ನಡೆದ ಅದ್ದೂರಿ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.
ನೂತನ ದಂಪತಿಗಳು ಹಣ್ಣು ಜವನ ಎಸೆದು ಪ್ರಾರ್ಥನೆ ಸಲ್ಲಿಸಿದರು.ಕೆ.ಎಸ್.ಆರ್.ಪಿ ಪೊಲೀಸರು ಸಿಡಿಮದ್ದು ಸಿಡಿಸಿ ಗೌರವ ಸಲ್ಲಿಸಿದರು.

