ಮೈಸೂರು, ಡಿ. 26- ಅಯ್ಯಪ್ಪ ಸ್ವಾಮಿ ಭಕ್ತರು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅಯ್ಯಪ್ಪ ಯಾತ್ರೆ ಪ್ರಾರಂಭಿಸಿ, ಮಹಾಮಾರಿ ಕರೋನಾ ದೇಶಾದ್ಯಂತ ಹರಡದಿರಲಿ, ಕರೋನ ಮುಕ್ತ ದೇಶವಾಗಲಿ ಪ್ರಾರ್ಥಿಸಿದರು.
ನಗರದ ಕನಕಗಿರಿ ನಿವಾಸಿ ಶಿವಕುಮಾರ್ ನೇತೃತ್ವದಲ್ಲಿ ನಾಡಿನ ಜನತೆಯ ಒಳಿತಿಗಾಗಿ ಇರುಮುಡಿ ಜೊತೆ ಸಂದೇಶದ ಭಾವಚಿತ್ರ ಹಿಡಿದು ಶಬರಿಮಲೆ ಅಯ್ಯಪ್ಪ ಸ್ವಾಮಿಯ ಯಾತ್ರೆಗೆ ತೆರಳಿದ್ದಾರೆ.
18 ಮೆಟ್ಟಲು ಹತ್ತುವಾಗ ಸಂದೇಶದ ಫಲಕ ಹಿಡಿದು ಹತ್ತಲಿದ್ದಾರೆ ಎಂದು ಅಯ್ಯಪ್ಪ ಭಕ್ತ ಶಿವಕುಮಾರ್ ತಿಳಿಸಿದ್ದಾರೆ.
ಚೀನಾ , ಅಮೇರಿಕ ಸೇರಿದಂತೆ 10ಕ್ಕೂ ಹೆಚ್ಚು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಬಿಎಫ್ 7 ಹೊಸ ತಳಿ ಇನ್ನು 2-3 ತಿಂಗಳಗಳಲ್ಲಿ ರಾಜ್ಯಕ್ಕೂ ಬರುವ ಸಾಧ್ಯತೆ ಇದೆ ಎಂದು ಈಗಾಗಲೇ ಸಂಬಂಧಪಟ್ಟ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದಾರೆ. ಹಾಗಾಗಿ ಅಯ್ಯಪ್ಪ ಭಕ್ತರು ದೇಶದ ಜನತೆ ಆರೂಗ್ಯದಿಂದ ಇರಲಿ ಎಂದು ಅಯ್ಯಪ್ಪ ಸ್ವಾಮಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

