ಮೈಸೂರು ಬಳಿ ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕಿಡಾಗಿದೆ.

ಪ್ರಹ್ಲಾದ್ ಮೋದಿ ಬಂಡಿಪುರ ಅಭಯಾರಣ್ಯ ವೀಕ್ಷಕಣೆಗೆ ತೆರಳುತ್ತಿದ್ದಾಗ ಮೈಸೂರು ಸಮೀಪದ ಕಡಕೊಳ ಬಳಿ ಅಪಘಾತ ಸಂಭವಿಸಿದೆ.

ಪ್ರಹ್ಲಾದ್ ಮೋದಿ ಅವರ ಮರ್ಸಿಡಿಸ್ ಬೆನ್ಜ್ ಕಾರು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರಿನಲ್ಲಿದ್ದ ಪ್ರಹ್ಲಾದ್ ಮೋದಿ, ಅವರ ಪುತ್ರ ಹಾಗೂ ಸೊಸೆಗೆ ಗಾಯವಾಗಿದೆ.

ಮೂವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಪಘಾತದಿಂದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.