ಮೈಸೂರು: ಸಾಹಸಸಿಂಹ ವಿಷ್ಣುವರ್ಧನ್ ರವರು ಮೂಲತಹ ಮೈಸೂರಿನವರಾದರೂ ವಿಶ್ವದಲ್ಲೇ ಜನಪ್ರಿಯ ರಾಗಿದ್ದಾರೆ ಎಂದು ಹಿರಿಯರಂಗಕರ್ಮಿ ಮಂಡ್ಯ ರಮೇಶ್ ಹೇಳಿದರು
ವಿಷ್ಣು ಅವರ ಪ್ರತಿಯೊಂದು ಚಿತ್ರಗಳು ಸಹ ಕೌಟುಂಬಿಕ ಪ್ರಧಾನವಾಗಿತ್ತು ಎಂದು ತಿಳಿಸಿದರು.
ಮೈಸೂರು ನಗರದ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಕರುಣಾಮಯಿ ವಿಷ್ಣು ಅಭಿಮಾನಿ ಬಳಗ ಏರ್ಪಡಿಸಿದ್ದ ಸಾಹಸಸಿಂಹ ವಿಷ್ಣುವರ್ಧನ್ ರವರ 13 ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಕನ್ನಡ ನೆಲ, ಜಲ, ಭಾಷೆಯ ವಿಚಾರಕ್ಕೆ ಧಕ್ಕೆ ಬಂದಾಗ ಧ್ವನಿ ಎತ್ತುತ್ತಿದ್ದ ಮಹಾನ್ ವ್ಯಕ್ತಿ ಡಾ. ವಿಷ್ಣುವರ್ಧನ ರವರು, ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಯ ಪರಿಕಲ್ಪನೆ ನೀಡಿದ್ದರು ಎಂದು ಸ್ಮರಿಸಿದರು.
ಇದೇ ವೇಳೆ ಬಳಗದ ವತಿಯಿಂದ ಮಹಿಳಾ ಪೌರಕಾರ್ಮಿಕರಿಗೆ ಸೀರೆ ವಿತರಿಸಲಾಯಿತು
ಕಾಂಗ್ರೆಸ್ ಮುಖಂಡರಾದ ಎನ್ಎಂ ನವೀನ್ ಕುಮಾರ್, ಪ್ರದೀಪ್ ಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ. ಡಿ. ಪಾರ್ಥಸಾರಥಿ, ವಿನಯ್ ಕಣಗಾಲ್, ಅಜಯ್ ಶಾಸ್ತ್ರಿ, ಸಂದೀಪ್, ಪೈಲ್ವಾನ್ ಸುನಿಲ್, ಕರುಣಾಮಯಿ ವಿಷ್ಣು ಅಭಿಮಾನಿ ಬಳಗ ಅಧ್ಯಕ್ಷ ಎಸ್. ಎನ್. ರಾಜೇಶ್, ಲಿಂಗರಾಜು, ರವಿಕುಮಾರ್, ಸುಚಿಂದ್ರ, ಚಕ್ರಪಾಣಿ, ಧರ್ಮೇಂದ್ರ , ಬಸವರಾಜು, ಮತ್ತಿತರರು ಹಾಜರಿದ್ದರು.

