ಮೈಸೂರು: ವೈಕುಂಠ ಏಕಾದಶಿ ಪ್ರಯುಕ್ತ 2023ರ ಜ. 2ರಂದು ವಿಶೇಷ ದರ್ಶನ ಏರ್ಪಡಿಸಲಾಗಿದೆ.
ಮೈಸೂರು–ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವೇಂಕಟೇಶ್ವರ ದೇವಾಲಯದಲ್ಲಿ ಜ. 2ರಂದು ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷವಾಗಿ ಉತ್ತರ ದ್ವಾರ ದರ್ಶನ ಏರ್ಪಡಿಸಲಾಗಿದೆ.
ದೇವಾಲಯದ ಉತ್ತರ ದ್ವಾರ ದರ್ಶನವನ್ನು ಅಂದು ಬೆಳಗ್ಗೆ 5ರಿಂದ ಮಧ್ಯಾನ್ಹ 1 ಮತ್ತು ಮಧ್ಯಾನ್ಹ 2ರಿಂದ ರಾತ್ರಿ 9 ರವರೆಗೆ ಭಕ್ತಾದಿಗಳ ಸೌಕರ್ಯಕ್ಕಾಗಿ ಕಲ್ಪಿಸಲಾಗಿದೆ.
ಈ ಸಮಯದಲ್ಲಿ ಭಕ್ತಾದಿಗಳು ಶ್ರೀ ದತ್ತ ವೇಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಸರ್ಕಾರದ ಆದೇಶದಂತೆ ಮುಖಕ್ಕೆ ಮಾಸ್ಕ್ ಧರಿಸಿರಬೇಕು ಮತ್ತು ಸಾಮಾಜಿಕ ಅಂತರವನ್ನು ಪಾಲಿಸಬೇಕು.
ಹೆಚ್ಚಿನ ವಿವರಗಳಿಗೆ ದೇವಸ್ಥಾನದ ಕಾರ್ಯಾಲಯ ದೂರವಾಣಿ ಸಂಖ್ಯೆ : 0821-2483200 ಮತ್ತು ಮೊಬೈಲ್: 9901392392ನ್ನು ಸಂಪರ್ಕಿಸಬಹುದಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪರಾದ ಕೆ. ಎನ್. ಅನಂತ ನಾರಾಯಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

