ಮೈಸೂರು: ವೈಕುಂಠ ಏಕಾದಶಿ ಪ್ರಯುಕ್ತ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಇಂದು ಉತ್ತರ ದ್ವಾರದರ್ಶನ ಮೂಲಕ ಸಹಸ್ರಾರು ಭಕ್ತರು ಸ್ವಾಮಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು, ಲೋಕ ಕಲ್ಯಾಣಾರ್ಥವಾಗಿ ಶ್ರೀದೇವಿ, ಭೂದೇವಿ ಸಹಿತ ಸ್ವಾಮಿಗೆ ವಿಶೇಷ ಅರ್ಚನೆ, ಅಲಂಕಾರ ಮಾಡಲಾಗಿದೆ ಎಂದು ತಿಳಿಸಿದರು.
ಧನುರ್ಮಾಸದ ಏಕಾದಶಿ ದಿನ ಉತ್ತರ ಧ್ವಾರ ದರ್ಶನ ಮಾಡಿ ಶ್ರೀ ಸ್ವಾಮಿಯನ್ನು ನೋಡಿ ಆನಂತರ ಪ್ರತಿಷ್ಟಾಪಿಸಲಾಗಿರುವ ವೆಂಕಟೇಶ್ವರ ಸ್ವಾಮಿಯನ್ನು ನೋಡಿದರೆ ಆ ವೈಕುಂಠ ಸ್ವಾಮಿಯನ್ನು ದರ್ಶನ ಮಾಡಿದಷ್ಟೇ ಫಲ ಸಿಗುತ್ತದೆ ಎಂದು ತಿಳಿಸಿದರು.
ಅಲ್ಲದೆ ಸರ್ವದೋಶ ಪರಿಹಾರ ಸಿಗುತ್ತದೆ,ಸಕಲ ಪಾಪ ಪರಿಹಾರವಾಗುತ್ತದೆ.ಒಳ್ಳೆಯ ಆರೋಗ್ಯ,ಐಶ್ವರ್ಯ,ಜ್ಞಾನ ಸಿಗುತ್ತದೆ ಎಂದು ಹೇಳಿದರು.
ನಮ್ಮ ಆಶ್ರಮದಲ್ಲಿ ಸಕಲ ದೇವತೆಗಳು ವಿರಾಜಮ ಮಾನ ರಾಗಿದ್ದಾರೆ. ಉತ್ತರ ಧ್ವಾರದಲ್ಲಿ ಶ್ರೀ ಸ್ವಾಮಿಗೆ ದರ್ಭಾರ್ ಅಲಂಕಾರ ಮಾಡಲಾಗಿದೆ ಎಂದು ತಿಳಿಸಿದರು.
ಧನ್ವಂತರಿ ದೇವಿಗೆ ವಿಶೇಷ ಅರ್ಚನೆ, ಪದ್ಮಾವತಿ ಅಮ್ಮನವರಿಗೆ ಸಹಸ್ರನಾಮ ಅರ್ಚನೆ ನೆರವೇರಿದೆ. ನಾರಾಯಣ ಹವನ ಮಾಡಲಾಗಿದೆ.
ಲೋಕ ಕಲ್ಯಾಣಾರ್ಥವಾಗಿ ಎಲ್ಲಾ ಪೂಜೆ ನೆರವೇರಿದ್ದು,ಬೆಳಗಿನಿಂದ ರಾತ್ರಿತನಕ ಪ್ರಸಾದವಿನಿಯೋಗ ಇರುತ್ತದೆ ಎಂದು ಸ್ವಾಮೀಜಿ ತಿಳಿಸಿದರು.
ಭೂಮಿ ಮೇಲೆ 107 ಕ್ಷೇತ್ರಗಳಿವೆ.108 ನೆಯದು ವೈಕುಂಠದಲ್ಲಿದೆ ಅಲ್ಲಿಗೆ ಹೋಗಲು ಎಲ್ಲಿಗೂ ಭಯ.ಅಲ್ಲಿ ಹೋಗಲು ಸಾಧ್ಯವೂ ಇಲ್ಲ ಹಾಗಾಗಿ ಭೂಮಿಯ ಮೇಲಿರುವ ಶ್ರೀ ಸ್ವಾಮಿಗೇ ನಾವು ಭಕ್ತಿಯಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.

