ಮೈಸೂರು: WAKO India ಮಹಿಳಾ ಸಮಿತಿಯ ಅಧ್ಯಕ್ಷೆ, ಕರ್ನಾಟಕ ಕಿಕ್ ಬಾಕ್ಸಿಂಗ್ ಕ್ರೀಡಾ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು WAKO ವರ್ಲ್ಡ್ ಸದಸ್ಯೆ ಪೂಜಾ ಹರ್ಷ ಅವರಿಗೆ ಪ್ರತಿಷ್ಠಿತ ಕರ್ನಾಟಕ ಮಹಿಳಾ ಸಾಧಕರ ಪ್ರಶಸ್ತಿ ಲಭ್ಯವಾಗಿದೆ
ಪೂಜಾ ಹರ್ಷ ಅವರು 1997 ರಲ್ಲಿ martial arts ಅಭ್ಯಾಸ ಪ್ರಾರಂಭಿಸಿದರು ಮತ್ತು 25 ವರ್ಷಗಳ ಅನುಭವವನ್ನು ಹೊಂದಿದ್ದಾರೆ.
ಅವರು 10,000+ ಕಿಕ್‌ಬಾಕ್ಸರ್‌ಗಳಿಗೆ ತರಬೇತಿ ನೀಡಿದ್ದಾರೆ. ಕರಾಟೆಯಲ್ಲಿ 4ನೇ ಡಿಗ್ರಿ ಬ್ಲಾಕ್ ಬೆಲ್ಟ್ ಮತ್ತು ಕಿಕ್ ಬಾಕ್ಸಿಂಗ್ ನಲ್ಲಿ 2ನೇ ಡಿಗ್ರಿ ಬ್ಲ್ಯಾಕ್ ಬೆಲ್ಟ್ ಹೊಂದಿದ್ದಾರೆ.
WAKO ಇಂಡಿಯಾದ 20 ವರ್ಷಗಳ ಇತಿಹಾಸದಲ್ಲಿ ರಾಜ್ಯ ಮುಖ್ಯಸ್ಥರಾಗುವ ಮೂಲಕ ರಾಜ್ಯವನ್ನು ಮುನ್ನಡೆಸುವ ಮೊದಲ ಮಹಿಳಾ ಭಾರತೀಯರಾಗಿದ್ದಾರೆ ಅಲ್ಲದೆ ಅವರು ಮೈಸೂರಿನವರು ಎಂಬುದು ಹೆಮ್ಮೆಯ ವಿಷಯ.
ಅವರು ಕರ್ನಾಟಕದ 18 ಜಿಲ್ಲೆಗಳಲ್ಲಿ ಕಿಕ್ ಬಾಕ್ಸಿಂಗ್ ಕ್ರೀಡೆಯನ್ನು ಪರಿಚಯಿಸಿದ್ದಾರೆ. ಮತ್ತು ಸತತವಾಗಿ 3 ಬಾರಿ ರಾಜ್ಯಕ್ಕೆ ಸಮಗ್ರ ಟ್ರೋಫಿಯನ್ನು ತಂದಿದ್ದಾರೆ.
ಕರ್ನಾಟಕ ತಂಡವನ್ನು ದಕ್ಷಿಣ ಭಾರತದ ಅತಿದೊಡ್ಡ ತಂಡವನ್ನಾಗಿ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.
2016 ರಲ್ಲಿ ಪ್ರಾಥಮಿಕ ಶಾಲೆಗಳಲ್ಲಿ WAKO ಕಿಕ್ ಬಾಕ್ಸಿಂಗ್ ಪರಿಚಯಿಸಿದ ಭಾರತದ ಮೊದಲ ಮಹಿಳೆಯಾಗಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂಜಾ ಅವರು ತನ್ನಲ್ಲಿ ಮಾರ್ಷಲ್ ಆರ್ಟ್ಸ್ ಆಸಕ್ತಿ ಬಿತ್ತಿದ ತನ್ನ ತಂದೆ ಹರಿದಾಸ್ ಮತ್ತು ತನ್ನನ್ನು ಕಿಕ್ ಬಾಕ್ಸಿಂಗ್ ಕ್ರೀಡೆಗೆ ಪರಿಚಯಿಸಿದ್ದಕ್ಕಾಗಿ ಎಎಸ್‌ಡಿ ಫೈಟ್ ಕ್ಲಬ್‌ನ ಸಂಸ್ಥಾಪಕ ಹರ್ಷ ಶಂಕರ್ ಅವರಿಗೆ ಈ ಪ್ರಶಸ್ತಿಯನ್ನು ಅರ್ಪಿಸಲು ಬಯಸುತ್ತೇನೆ ಎಂದು ಹೇಳಿದರು.
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕಿಕ್ ಬಾಕ್ಸಿಂಗ್ ಕ್ರೀಡೆಯನ್ನು ಪರಿಚಯಿಸುವುದು ಮತ್ತು ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಕಣಕ್ಕೆ ತರುವುದು ನನ್ನ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಆಯೋಜಿಸಿದ್ದ KWAA – Founder ಸ್ಪೂರ್ತಿ ವಿಶ್ವಾಸ್ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತಿತರರು ಹಾಜರಿದ್ದರು.

