ನವದೆಹಲಿ: ಕೇಂದ್ರ ಬಜೆಟ್ ನಲ್ಲಿ ಚಿನ್ನ, ಬೆಳ್ಳಿ, ವಜ್ರ ಖರೀದಿದಾರರಿಗೆ ನಿರಾಸೆಯಾಗಿದೆ.ಆದರೆ ಕ್ಯಾಮರಾ ಲೆನ್ಸ್ ಟಿವಿ, ಮೊಬೈಲ್ ಬಳಕೆದಾರರಿಗೆ ಸಿಹಿಸುದ್ದಿ ನೀಡಲಾಗಿದೆ.
ದೇಶದ ಚಿನ್ನಪ್ರಿಯರಿಗೆ ಬಜೆಟ್ ನಲ್ಲಿ ಶಾಕ್ ನೀಡಲಾಗಿದೆ. ಚಿನ್ನ, ಬೆಳ್ಳಿ ವಜ್ರ ಬೆಲೆ ಏರಿಕೆಯಾಗಲಿದೆ.
ಮೊಬೈಲ್ ಫೋನ್, ಕ್ಯಾಮರಾ ಲೆನ್ಸ್ ಆಮದು ಸುಂಕ ರದ್ದು ಮಾಡಲಾಗಿದ್ದು.ನಿಶ್ಚಿತವಾಗಿ ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆಯಾಗಲಿದೆ.
ಲಿಥೀಯಂ ಬ್ಯಾಟರಿ ಮೇಲಿನ ಸುಂಕ ಕಡಿತ ಮಾಡಲಾಗಿದೆ,ಸಿಗರೇಟ್, ರೆಡಿಮೆಡ್ ಬಟ್ಟೆಗಳು ಇನ್ನೂ ದುಬಾರಿಯಾಗಲಿದೆ.
ಬ್ಲೆಂಡೆಡ್ ಸಿಎನ್ ಜಿಗೆ ಕಸ್ಟಮ್ಸ್ ಸುಂಕ ರದ್ದು ಮಾಡಲಾಗಿದೆ, ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ಬೆಲೆ ಇಳಿಕೆಯಾಗಲಿದ್ದು,ವಿದೇಶಿ ವಾಹನಗಳ ಆಮದು ದುಬಾರಿಯಾಗಲಿದೆ.

