ನವದೆಹಲಿ: ಮಧ್ಯಮ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು,7 ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, ಹೊಸ ತೆರಿಗೆ ಪದ್ದತಿ ಘೋಷಣೆ ಮಾಡಿದರು.
ಆದಾಯ ತೆರಿಗೆ ಮಿತಿ 7 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ವಾರ್ಷಿಕ 7 ಲಕ್ಷದವರೆಗೂ ಆದಾಯ ತೆರಿಗೆ ಇರುವುದಿಲ್ಲ, ಮಧ್ಯಮ ವರ್ಗ ದೃಷ್ಠಿಯಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವೆ ತಿಳಿಸಿದ್ದಾರೆ.
ಇನ್ನು ಸೇವಾ ಸುಂಕ 37 ರಿಂದ 27 ಪರ್ಸೆಂಟ್ ಗೆ ಇಳಿಕೆ ಮಾಡಲಾಗಿದೆ. 3 ಲಕ್ಷದವರೆಗೆ ಯಾವುದೇ ವೈಯಕ್ತಿಕ ತೆರಿಗೆ ಇರುವುದಿಲ್ಲ. 3 ರಿಂದ 6 ಲಕ್ಷದವರೆಗೆ ಶೇ.5 ರಷ್ಟು ತೆರಿಗೆ, 6 ರಿಂದ 9ಲಕ್ಷದವರೆಗೆ ಶೇ. 10 ರಷ್ಟು ತೆರಿಗೆ, 9 ರಿಂದ 12 ಲಕ್ಷದವರೆಗೆ ಶೇ.15 ಪರ್ಸೆಂಟ್ ತೆರಿಗೆ ಹಾಗೂ 12 ರಿಂದ 15 ಲಕ್ಷದವರೆಗೆ 20 ಪರ್ಸೆಂಟ್ ತೆರಿಗೆ ವಿಧಿಸಲಾಗಿದೆ.
ಹೊಸ ತೆರಿಗೆ ಪದ್ಧತಿಯೇ ಇನ್ನು ಮುಂದೆ ಡಿಫಾಲ್ಟ್ ತೆರಿಗೆ ಪದ್ಧತಿ ಆಗಿರುತ್ತದೆ. ಆದರೆ ಹಳೆಯ ತೆರಿಗೆ ಪದ್ಧತಿಯೂ ಚಾಲ್ತಿಯಲ್ಲಿರುತ್ತದೆ.
ತೆರಿಗೆ ಸ್ಲ್ಯಾಬ್ಗಳನ್ನು 6 ಹಂತಗಳಿಂದ 5 ಹಂತಗಳಿಗೆ ಬದಲಿಸಲಾಗಿದೆ.

