ಪರ್ವೇಜ್ ಮುಶ್ರಪ್   ನಿಧನ

ದುಬೈ: ಪಾಕಿಸ್ತಾನದ ಮಾಜಿ
ಅಧ್ಯಕ್ಷ ಪರ್ವೇಜ್ ಮುಶ್ರಪ್ ಇಂದು  ನಿಧನರಾಗಿದ್ದಾರೆ.

ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು
ದುಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮುಷರಫ್​​​ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.

ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕ್​ ಸುಪ್ರೀಂಕೋರ್ಟ್ ಗಡಿಪಾರು ಮಾಡಿತ್ತು.
ಹಾಗಾಗಿ ಅವರು ದುಬೈನಲ್ಲಿ ನೆಲೆಸಿದ್ದರು.

ನವಾಜ್​ ಷರೀಫ್​​​ ಅವರನ್ನು ಕೆಳಗಿಳಿಸಿ
ಮುಷರಫ್​​ 1999 ರಿಂದ 2008ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು.

ಮುಷರಫ್​​​ ಭಾರತದ ವಿರುದ್ಧ ಕಾರ್ಗಿಲ್​ ಸಮರ ಸಾರಿ ಮುಖಭಂಗ ಅನುಭವಿಸಿದ್ದರು.

ಪರ್ವೇಜ್​ ಮುಷರಫ್​​ 1998ರಿಂದ ಪಾಕಿಸ್ತಾನದ ಮಿಲಿಟರಿ ಜನರಲ್​ ಆಗಿದ್ದರು.