ಮೈಸೂರು: ನಿಜವಾದ ಶಿಕ್ಷಣವು ವ್ಯಕ್ತಿತ್ವ ಹಾಗೂ ಪ್ರಾಮಾಣಿಕ ಪ್ರತಿಭೆಯನ್ನು ನಿರ್ಮಿಸುತ್ತದೆ ಎಂದು ಆರ್ ಎಸ್‌ಎಸ್ ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ತಿಳಿಸಿದರು.

ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 13 ನೆ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಣ ಆತ್ಮವಿಶ್ವಾಸವನ್ನು ತುಂಬುತ್ತದೆ ಮತ್ತು ಅರ್ಥಪೂರ್ಣ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಸುಶಿಕ್ಷಿತರು ಹೆಚ್ಚಾದಾಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಹೆಚ್ಚಾಗಿ ಶಿಕ್ಷಣಕ್ಕೆ ನೀಡಿದ ಮಹತ್ವದಿಂದಾಗಿ ನಮ್ಮ ರಾಷ್ಟ್ರ ಹೆಮ್ಮೆಯ ಆಸ್ತಿಯಾಗಿದೆ.
ಸ್ವಾಮಿ ವಿವೇಕಾನಂದರು ಮತ್ತು ಮಹಾತ್ಮಗಾಂಧೀಜಿ ಹೇಳುವಂತೆ ಶಿಕ್ಷಣ ಜೀವನದಲ್ಲಿ ಮಹತ್ವವುಳ್ಳದ್ದು ಎಂದರು.
ಕಾರ್ಯಾಕ್ರಮದಲ್ಲಿ ಎಸ್ ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು.
65 ವಿದ್ಯಾರ್ಥಿಗಳಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ಪ್ರಧಾನ ಮಾಡಲಾಯಿತು.
25 ವಿದ್ಯಾರ್ಥಿಗಳಿಗೆ ಮಾಸ್ಟರ್ ಆಫ್ ಫಿಲಾಸಫಿ ಪದವಿ ಪ್ರಧಾನ ಮಾಡಲಾಯಿತು.
ಆರು ವಿದ್ಯಾರ್ಥಿಗಳು ಡಾಕ್ಟರೇಟ್ ಆಫ್ ಮೆಡಿಸನ್ ಮತ್ತು ಎಂ ಸಿ ಹೆಚ್ ಪದವಿ ಪಡೆದರು, 60 ಟಾಪರ್ಸ್ ಗಳಿಗೆ ಅವರವರ ಶೈಕ್ಷಣಿಕ ಸಾಧನೆಗಾಗಿ 83 ಪದಕಗಳನ್ನು ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಡಾ.ಸಿ.ಜಿ.ಬೆಟಸೂರಮಠ್,ಸಮಕುಲಾಧಿಪತಿ ಡಾ.ಬಿ.ಸುರೇಶ್,ಕುಲಪತಿ ಡಾ.ಸುರೀಂದರ್ ಸಿಂಗ್,ಕುಲಸಚಿವ ಡಾ.ಬಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

