ಸಂಗೀತ ವಿಶ್ವದ ಏಕಸಾಮ್ಯತೆ ಹೊಂದಿರುವ ಯೋಗ -ಅರುಣ್ ಸಾಗರ್

ಮೈಸೂರು: ಸಂಗೀತವು ವಿಶ್ವದ ಏಕ ಸಾಮ್ಯತೆ ಹೊಂದಿರುವ ಒಂದು ಯೋಗವಾಗಿದೆ ನಟ ಅರುಣ್ ಸಾಗರ್ ಹೇಳಿದರು.

ಸಂಗೀತ ಜಗತ್ತಿನ ಎಲ್ಲ ರಾಷ್ಟ್ರ ಸಂಸ್ಕೃತಿ, ಭಾಷೆ, ಗೌರವಿಸುವ ಭಾರತೀಯ ಮೂಲ ಕಲೆಯಾಗಿದೆ ಎಂದು ತಿಳಿಸಿದರು.

ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ತಾಳವಾದ್ಯ ಪ್ರತಿಷ್ಠಾನ ಟ್ರಸ್ಟ್ 16 ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಲಾ ರತ್ನ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಆರೋಗ್ಯ, ಸಾಂಸ್ಕೃತಿ ಜೀವನ, ಶಿಸ್ತು ಮೂಡಿಸುವಲ್ಲಿ ಸಂಗೀತ ದೊಡ್ಡ ಪಾತ್ರ ವಹಿಸುತ್ತದೆಸಾಂಸ್ಕೃತಿಕ ರಾಜಧಾನಿ ಮೈಸೂರು ಕಲಾವಿದರ ತವರೂರು ಇದಕ್ಕೆ ಸಂಗೀತದ ಶಕ್ತಿಯೇ ಕಾರಣ ಎಂದು ಹೇಳಿದರು.

ಸಂಗೀತ ಅಭ್ಯಾಸದಿಂದ ಆರೋಗ್ಯ ವೃದ್ಧಿಸುತ್ತದೆ ಶಂಖನಾದ ಶಾಸ್ವಕೋಶ ಶುದ್ಧಿ ಮಾಡುತ್ತದೆ ಜನಪದ ಶೈಲಿ ಉತ್ತಮ ಆರೋಗ್ಯಕ್ಕೆ ಸಹಕಾರಿ.

ವೇದಮಂತ್ರ ಮೆದುಳಿಗೆ ಶಕ್ತಿ ಹೆಚ್ಚಿಸುತ್ತದೆ ಹಿಂದೂಸ್ತಾನಿ ಕರ್ನಾಟಿಕ್ ಸಂಗೀತ ಪ್ರದರ್ಶನಕ್ಕೆ ವಿದೇಶಗಳಲ್ಲಿ ಗೌರವವಿದೆ ಕಟ್ಟುನಿಟ್ಟಿನ ಸಂಗೀತ ಪ್ರಕಾರದಿಂದ ಆರೋಗ್ಯ ವೃದ್ಧಿಯಾಗುತ್ತದೆ.

ಮಕ್ಕಳನ್ನು ಕಡ್ಡಾಯವಾಗಿ ಸಂಗೀತ ಶಾಲೆಗೆ ಸೇರಿಸಿದರೆ ಅವರ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಅರುಣ್ ಸಾಗರ್ ಸಲಹೆ ನೀಡಿದರು.

ಹಲವು ಸಾಧಕರು ನಟರಿಗೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಆನಂತರ ಶಾಲೆಯಲ್ಲಿ ಉತ್ತೀರ್ಣಗೊಂಡ ಮಕ್ಕಳಿಗೆ ಟ್ರಿನಿಟಿ ಕಾಲೇಜ್ ಆಫ್ ಲಂಡನ್ ಪ್ರಮಾಣ ಪತ್ರ ವಿತರಿಸಲಾಯಿತು

ಹಿರಿಯ ಸಮಾಜಸೇವಕರಾದ ಕೆ ರಘುರಾಮ್ ವಾಜಪೇಯಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾನಂದೀಶ್, ಖ್ಯಾತ ಮನೋವೈದ್ಯೆ ಡಾ. ರೇಖಾ, ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಅಧ್ಯಕ್ಷ ಡಾ. ಸಿ ಆರ್ ರಾಘವೇಂದ್ರ ಪ್ರಸಾದ್, ನಿರೂಪಕ ಅಜಯ್ ಶಾಸ್ತ್ರಿ, ಉಪಾಧ್ಯಕ್ಷೆ ಆರ್. ಮಂಗಳ ಮತ್ತಿತರರು ಭಾಗವಹಿಸಿದ್ದರು.