ನಾಡಿಗೆ‌ ಬಂದ ಕಾಡಾನೆ ಹಿಂಡು; ಗ್ರಾಮಸ್ಥರಲ್ಲಿ ಆತಂಕ (Video)

ಮೈಸೂರು: ಕಾಡಿನಿಂದ ನಾಡಿಗೆ ಆನೆಗಳ ಹಿಂಡು ಬಂದಿದ್ದು ಕೆರೆಯಲ್ಲಿ ಸ್ವಚ್ಛಂವಾಗಿ ವಿಹರಿಸುತ್ತಿವೆ.

ಆದರೆ ಯಾವ ಕ್ಷಣದಲ್ಲಿ ಮನೆಗಳ ಕಡೆ ಆನೆಗಳು ಬಂದಾವೋ ಎಂಬ ಭೀತಿಯಲ್ಲಿ ಜನ ಇದ್ದಾರೆ.

ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಸರಗೂರಿನ ನುಗು ಹಿನ್ನೀರಿನಲ್ಲಿ 5 ಆನೆಗಳ ಗುಂಪು ಕಾಣಿಸಿಕೊಂಡಿದೆ.

ಸದ್ಯಕ್ಕೆ ಮುಳ್ಳೂರು ಗ್ರಾಮದ ಹೊರವಯದಲ್ಲಿ ಆನೆಗಳು ಬೀಡು ಬಿಟ್ಟಿವೆ.

ಜತೆಗೆ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಅಡ್ಡಾಡಿ ಬೆಳೆ ನಾಶ ಮಾಡಿವೆ.ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಅವುಗಳನ್ನು ಮತ್ತೆ ಕಾಡಿಗೆ ಕಳುಹಿಸಲು ಹರಸಾಹಸ ಪಡುತ್ತಿದ್ದಾರೆ.

ಈಗಾಗಲೇ ಆನೆಗಳು ರಾಗಿ, ಕಬ್ಬು ಬೆಳೆ ನಾಶ ಮಾಡಿವೆ.ಸಮೀಪದಲ್ಲೇ ನೀರೂ ಇರುವುದರಿಂದ ಆನೆಗಳನ್ನು ಅರಣ್ಯಕ್ಕೆ ಕಳುಹಿಸುವುದು ಸುಲಭದ ಮಾತಲ್ಲ,ಆದರೂ ಪ್ರಯತ್ನ ನಡೆದಿದೆ.