ಸಾಧಕರಿಗೆ ಹೆಚ್  ಕ್ಯಾಟಗರಿಯಡಿ ನಿವೇಶನ -ಯಶಸ್ವಿ ಸೋಮಶೇಖರ್

ಮೈಸೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹೆಚ್ ಕ್ಯಾಟಗರಿಯಡಿ ನಿವೇಶನಗಳನ್ನು ನೀಡಲಾಗುವುದು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್ ತಿಳಿಸಿದ್ದಾರೆ.

ಮುಡ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು‌ ಈ ವಿಷಯ ತಿಳಿಸಿದರು.

ಹೆಚ್ ಕ್ಯಾಟಗರಿಯಡಿ‌ ಒಟ್ಟು 188 ನಿವೇಶನಗಳನ್ನು ಮೈಸೂರಿನ ದೇವನೂರು ಬಡಾವಣೆ ಮೂರನೆ ಹಂತದಲ್ಲಿ ಕೊಡಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿರುವ ವಿವಿಧ ಕ್ಷೇತ್ರದಲ್ಲಿನ ಸಾಧಕರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.

20X30 ನಿವೇಶನಕ್ಕೆ 5.23ಲಕ್ಷರೂ,30X40 ನಿವೇಶನಕ್ಕೆ 10.46ಲಕ್ಷ ರೂ,60X40ನಿವೇಶನಕ್ಕೆ 20.92ಲಕ್ಷರೂ ಹಾಗೂ 50X80 ಅಳತೆಯ ನಿವೇಶನಕ್ಕೆ34.86ಲಕ್ಷ ರೂ ನಿಗದಿಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಿಎ ನಿವೇಶನ

ಹೊಸದಾಗಿ ಒಟ್ಟು 150 ಸಿಎ ನಿವೇಶಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

2020-21ರಲ್ಲಿ ಒಟ್ಟು 312 ಸಿಎ ನಿವೇಶನಗಳನ್ನು ಹಂಚಲು ನಿರ್ಧರಿಸಲಾಗಿತ್ತು.

ಈ‌ ಪೈಕಿ 92ನಿವೇಶನಗಳಿಗೆ ಯಾರೂ ಅರ್ಜಿ‌ ಹಾಕಿರಲಿಲ್ಲ.ಅವುಗಳೂ ಸೇರಿದಂತೆ ಒಟ್ಟು 150 ಸಿಎ ನಿವೇಶನಗಳಿಗೆ ಅರ್ಜಿ ಕರೆಯಲಾಗಿದೆ ಎಂದು ತಿಳಿಸಿದರು.

ಮೈಸೂರಿನಲ್ಲಿ ವಾಹನ ದಟ್ಟಣೆ ನಿಯಂತ್ರಣ ಕ್ಕಾಗಿ ವಿಜಯನಗರ,ಜೆಪಿ ನಗರ ಬೋಗಾದಿಯಲ್ಲಿ ಫೈಓವರ್ ಹಾಗೂ ಅಂಡರ್ ಪಾಸ್ ನಿರ್ಮಾಣಕ್ಕೆ ಮುಡ ಕ್ರಮ ಕೈಗೊಂಡಿದೆ ಎಂದು ಸೋಮಶೇಕರ್ ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯಶಸ್ವಿ ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಆದರೆ‌ ಕ್ಷೇತ್ರ ಯಾವುದು ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಎಸ್ ಬಿ ಎಂ ಮಂಜು,ಮುಡ ಆಯುಕ್ತ ದಿನೇಶ್ ಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು .