ಮೈಸೂರು: ವಿಷ್ಣು ಸಹಸ್ರನಾಮ ಪಠಣದಿಂದ ವಿವಿಧ ರೋಗ, ಬಂಧನ, ಭಯ, ಆಪತ್ತು ಎಂಬ ವಿಘ್ನಗಳಿಂದ ದೂರವಾಗಬಹುದು ಎಂದು ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಡಿ.ಟಿ.ಪ್ರಕಾಶ್ ಹೇಳಿದರು.
ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ಮೈಸೂರು ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಪರಮಾತ್ಮನ ಒಂದೇ ತತ್ವದ ಕಡೆ ನಮ್ಮನ್ನೂ ತೆಗೆದುಕೊಂಡು ಹೋಗುವುದಿದ್ದರೆ ಅದು ಭಗವದ್ಗೀತೆ ಮತ್ತು ವಿಷ್ಣು ಸಹಸ್ರನಾಮ ಪಠಣ ಮಾತ್ರ ಎಂದು ತಿಳಿಸಿದರು.
ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಹಾಗೂ ಭಾರತದ ಉದ್ದಗಲಕ್ಕೂ ವಿಷ್ಣು ಸಹಸ್ರನಾಮದ ಪ್ರಸರಣಕ್ಕಾಗಿಯೇ ಮೀಸಲಾದ ಸಂಸ್ಥೆಯಾಗಿದೆ. ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ಅವರ ಸೇವೆ ಅಪಾರ ಎಂದು ಹೇಳಿದರು.
ಡಾ.ಭಾಷ್ಯಂ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.
ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಸಂಸ್ಥೆಯ ಸಂಸ್ಥಾಪಕ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ವಿಶ್ವ ವಿಪತ್ರಯೀ ಪರಿಷತ್ ಅಧ್ಯಕ್ಷ ಎಸ್.ರಘುನಾಥ್, ಸಂಸ್ಥೆಯ ಮೈಸೂರು ವಿಭಾಗದ ಸಂಚಾಲಕ ರಮಾಕಾಂತ ಶೆಣೈ, ಎಚ್.ಕೆ.ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ವಿ.ಭರದ್ವಾಜ್, ಡಾ.ಜಗನ್ನಾಥ್ ಶೆಣೈ, ಮಂಗಳಾ ಭಾಸ್ಕರ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಲತಾ ಬಾಲಕೃಷ್ಣ, ಶೇಷಾದ್ರಿ, ಸುಚಿಂದ್ರ, ಚಕ್ರಪಾಣಿ ಮತ್ತಿತರರು ಹಾಜರಿದ್ದರು.

