ಪ್ರೇಮಿಗಳ ದಿನ ವಿರೋಧಿಸಿ ದೇಶ ಪ್ರೇಮ ದಿನ ಆಚರಣೆ

ಮೈಸೂರು: ಫೆ.14ರಂದು ಯುವಜನತೆ ಪ್ರೇಮಿಗಳ ದಿನ ಆಚರಿಸಿದರೆ ಇತ್ತ ಇದನ್ನು ಧಿಕ್ಕರಿಸಿ ಮೈಸೂರಿನಲ್ಲಿ ದೇಶಪ್ರೇಮ ದಿನವಾಗಿ ಆಚರಿಸಲಾಯಿತು.

ನಗರದ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ವೃತ್ತದಲ್ಲಿ ಯುವ ಭಾರತ್ ಸಂಘಟನೆಯವರು ದೇಶಪ್ರೇಮ ದಿನ ಹಾಗೂ ಪುಲ್ವಾಮಾ ದಾಳಿಯ ಕರಾಳ ದಿನ ವನ್ನು ಆಚರಿಸಿದರು.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರ ಹಿಡಿದು ಅವರ ತ್ಯಾಗ ಬಲಿದಾನವನ್ನು  ಸ್ಮರಿಸಲಾಯಿತು.

ಪ್ರೇಮಿಗಳ ದಿನಾಚರಣೆಗೆ ಧಿಕ್ಕಾರ ಕೂಗಿದ ಸಂಘಟನೆಯವರು ವಿಶ್ವ ದೇಶಪ್ರೇಮಿಗಳಿಗೆ ಜಯವಾಗಲಿ ,ಭಾರತ್ ಮಾತಾಕಿ ಜೈ ವಂದೇ ಮಾತರಂ ,ವೀರ ಯೋಧರು ಅಮರರಾಗಲಿ ,ಸೈನಿಕರ ದಿನಾಚರಣೆಗೆ ಜಯವಾಗಲಿ ಎಂಬ ಘೋಷಣೆಗಳನ್ನು ಕೂಗಿದರು.

ವೇಳೆ ಮಾತನಾಡಿದ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್, ಪ್ರೇಮ ದಿನಾಚರಣೆ ನಮ್ಮ ಸಂಸ್ಕೃತಿಯಲ್ಲ, ಪ್ರೀತಿ ಪ್ರೇಮ ತಂದೆತಾಯಿ,ಗುರುಹಿರಿಯರು ದೇಶದ ಬೆನ್ನಲುಬಾದ ಸೈನಿಕರು ಮತ್ತು ರೈತರ ಮೇಲೆ ಇರಬೇಕು ಎಂದು ತಿಳಿಸಿದರು.

ಅರ್ಥವಿಲ್ಲದ ಪ್ರೇಮಿಗಳ ದಿನಾಚರಣೆ ಸರಿಯಲ್ಲ ಎಂದು ಹೇಳಿದರು .

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ. ಟಿ. ಪ್ರಕಾಶ್ ಮಾತನಾಡಿ,

ಪುಲ್ವಾಮಾ ಜಿಲ್ಲೆಯ ಲೆಥೋರಾದಲ್ಲಿ  ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಿ,ಕೇಂದ್ರ ಮೀಸಲು ಪಡೆಯ 40 ಮಂದಿ ಯೋಧರು ಪ್ರಾಣ ತೆತ್ತಿದ್ದರು, ವೀರ ಯೋಧರ ತ್ಯಾಗ ಬಲಿದಾನಗಳನ್ನು ನಾವೆಲ್ಲ ಸ್ಮರಿಸಬೇಕು ಎಂದು ಹೇಳಿದರು.

ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಬಲಿಯಾಗಿ ಹುತಾತ್ಮರಾದ ಸೈನಿಕರನ್ನು ನೆನೆಯಲು ದಿನವನ್ನು ದೇಶಪ್ರೇಮದ ದಿನವನ್ನಾಗಿಸೋಣ ಎಂದು ಕರೆ ನೀಡಿದರು.

ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಮೈಸೂರು ನಗರ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾ ಅಧ್ಯಕ್ಷ ಜೋಗಿ ಮಂಜು,ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾನಂದೀಶ್, ಅಜಯ್ ಶಾಸ್ತ್ರಿ, ನಗರಪಾಲಿಕೆ ನಾಮನಿರ್ದೇಶಕ ಸದಸ್ಯ ಜಗದೀಶ್, ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ ರಾಕೇಶ್ ಭಟ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸಚಿನ್, ಸೂರಜ್, ಮಹದೇವ ಪ್ರಸಾದ್, ಕಡಕೊಳ ಜಗದೀಶ್,ಸುಚೀಂದ್ರ, ವಿಘ್ನೇಶ್ವರ ಭಟ್, ಎಸ್. ಎನ್. ರಾಜೇಶ್, ದುರ್ಗಾ ಪ್ರಸಾದ್, ಶ್ರೀನಿ ವಾಸ್, ಚರಣ್, ಲಿಂಗರಾಜು ಮತ್ತಿತರರು ಪಾಲ್ಗೊಂಡಿದ್ದರು.