ಬೆಂಕಿ ತಗುಲಿ ಕಾಯರ್ ಕಾರ್ಖಾನೆಯಲ್ಲಿ 1ಕೋಟಿಗೂ ಅಧಿಕ ವಸ್ತು ನಾಶ

ಮೈಸೂರು: ತೆಂಗಿನ ನಾರಿನಿಂದ ಪದಾರ್ಥಗಳನ್ನ ತಯಾರಿಸುವ ಕಾಯರ್ ಕಾರ್ಖಾನೆಗೆ ಬೆಂಕಿ ಬಿದ್ದು ಕೋಟ್ಯಂತರ ರೂ ವಸ್ತುಗಳು‌ ಭಸ್ಮವಾದ ಘಟನೆ ಹುಣಸೂರು ತಾಲೂಕು ತೆಂಕನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಬೆಂಕಿ ಅವಘಡ ದಲ್ಲಿ ಒಂದು ಕೋಟಿಗೂ ಅಧಿಕ ಪ್ರಮಾಣದ ಖಚ್ಚಾ ಹಾಗೂ ಸಿದ್ದಪಡಿಸಿದ ಪದಾರ್ಥಗಳು ಸುಟ್ಟು ಭಸ್ಮವಾಗಿದೆ.

ಹೆಸೇನ್ ಪುರ ಗ್ರಾಮ ಪಂಚಾಯ್ತಿ ಸದಸ್ಯ ಶ್ರೀನಿವಾಸ್ ಎಂಬುವರಿಗೆ ಸೇರಿದ ಶ್ರೀ ಸಿದ್ದೇಶ್ವರ ಕಾಯರ್ ಫ್ಯಾಕ್ಟರಿ ಹಾಗೂ ಶ್ರೀ ಮುರಳಿ ಕೋಕೋ ಪೀಟ್  ಫ್ಯಾಕ್ಟರಿಯಲ್ಲಿ ಘಟನೆ ನಡೆದಿದೆ.

ಫ್ಯಾಕ್ಟರಿ ಬಳಿ ಹಾದು ಹೋಗಿರುವ ವಿದ್ಯುತ್ ತಂತಿಗಳಲ್ಲಿ ಘರ್ಷಣೆಯುಂಟಾಗಿ ಬೆಂಕಿ ಕಿಡಿ ಹಾರಿ ಕಾರ್ಖಾನೆಗಳಿಗೆ ಹರಡಿದೆ ಎಂದು ಸ್ಥಳೀಯರು ಹೇಳುತ್ತಾರೆ.

2 ಎಕರೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಬೃಹತ್  ಕಾರ್ಖಾನೆಗೆ ಬೆಂಕಿ ತಗುಲಿದೆ

ಕಾರ್ಖಾನೆಗೆ ಭಾನುವಾರ ರಜೆ ಇದ್ದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ.

ವಿಷಯ ತಿಳಿದು ಅಗ್ನಿ ಶಾಮಕ ಸಿಬ್ಬಂದಿ  ಧಾವಿಸಿ ಬೆಂಕಿ ನಂದಿಸಲು ಯತ್ನಿಸಿದರೂ ನಾರಿನ ಪದಾರ್ಥವಾದುದರಿಂದ ಸಂಪೂರ್ಣ ಪದಾರ್ಥಗಳು ನಾಶವಾಗಿದೆ.