ಚಾಮುಂಡಿ ಬೆಟ್ಟದ ‌ತಪ್ಪಲಲ್ಲಿ‌ ಬೆಂಕಿ ಇಟ್ಟ ಕೇಡಿಗಳು

ಮೈಸೂರು: ಮೈಸೂರು ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದ ಎದುರು  ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ.

ಈಗ ಬಿರು‌ ಬಿಸಿಲು ಹಾಗಾಗಿ ಒಂದು ಕಿಡಿ‌ ಬಿದ್ದರೂ ಸಾಕು‌‌‌ ಎಲ್ಲಾ ಗಿಡ ಮರಗಳು ‌ಸುಟ್ಟು ಹೋಗಿಬಿಡುತ್ತವೆ.

ಇಡೀ ಬೆಟ್ಟದ ತಪ್ಪಲಿಗೆ ಬೆಂಕಿ ಕೆನ್ನಾಲಿಗೆ ಚಾಚಿದೆ.ಹೊಗೆ ತುಂಬಿಕೊಂಡು ಬಹಳಷ್ಟು ಪಕ್ಷಿಗಳಿಗೆ,ಈ ಭಾಗದ‌  ಜನರಿಗೆ ತೀವ್ರ ತೊಂದರೆಯಾಯಿತು.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದವರು ದಾವಿಸಿ ಬೆಂಕಿ ಆರಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಯಾರು ಇಂತಹ ಕೆಟ್ಟ ಕೆಲಸ‌ಮಾಡಿದ್ದಾರೋ ಅವರಿಗೆ‌ ಸರಿಯಾದ ಶಿಕ್ಷೆ ನೀಡಬೇಕೆಂದು ಪರಿಸರ ಪ್ರೇಮಿಗಳು‌ ಆಗ್ರಹಿಸಿದ್ದಾರೆ.