ರಸಾಯನಶಾಸ್ತ್ರವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲು ಕರ್ನಾಟಕ ಸೇನಾಪಡೆ ಆಗ್ರಹ

ಮೈಸೂರು: ನಿನ್ನೆ ಅಂದರೆ ಮಂಗಳವಾರ ನಡೆದ ರಸಾಯನಶಾಸ್ತ್ರ ಪರೀಕ್ಷೆ ಪ್ರಶ್ನೆ ಪತ್ರಿಕೆ ಅತ್ಯಂತ ‌ಕಠಿಣವಾಗಿದ್ದು ರಾಜ್ಯಾದ್ಯಂತ ಎಲ್ಲಾ‌ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಬೇಕೆಂದು

ಕರ್ನಾಟಕ ಸೇನಾ ಪಡೆ ಆಗ್ರಹಿಸಿದೆ.

ಇಂದು ಅಂದರೆ ಬುಧವಾರ ಸಂಜೆ ಜಿಲ್ಲಾಧಿಕಾರಿ ಗಳನ್ನು ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ‌ ತೇಜೇಶ್ ಲೋಕೇಶ್ ಗೌಡ ನೇತೃತ್ವದಲ್ಲಿ ಸದಸ್ಯರು ಭೇಟಿಯಾಗಿ ಈ‌ ಬಗ್ಗೆ ಮನವಿ ಸಲ್ಲಿಸಿದರು.

ಈ‌ ವೇಳೆ ಮಾಧ್ಯಮ ‌ಪ್ರತಿನಿಧಿಗಳೊಂದಿಗೆ ತೇಜೇಶ್ ಲೋಕೇಶ್ ಗೌಡ ಮಾತನಾಡಿ ಸರ್ಕಾರದ ‌ನಡೆಯನ್ನು ತೀವ್ರವಾಗಿ ಖಂಡಿಸಿದರು.

ಈ ಪ್ರಶ್ನೆ ಪತ್ರಿಕೆ ಗಮನಿಸಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಭಾರಿ ಆಘಾತ ಉಂಟು ಮಾಡಿದೆ.

ದ್ವಿತೀಯ ಪಿ.ಯು.ಸಿ.ಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಅನುತೀರ್ಣರಾಗುತ್ತಿದ್ದಾರೆ‌ ಎಂಬ‌ ಕಾರಣಕ್ಕೆ ಈ ಸರ್ಕಾರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ MCQ ಪರಿಚಯವನ್ನು ಜನವರಿಯಲ್ಲಿ ಮಾಡಿದೆ.

ಅದಕ್ಕೆ ಪರಿಹಾರ ವಾಗಿ MCQ ಮೂಲಕ ತೇರ್ಗಡೆ ಹೊಂದಲು ಸಹಾಯ ಮಾಡಬೇಕು ಎಂಬ ಉದ್ದೇಶ ಇದೆ.

ಆದರೆ ನಿನ್ನೆಯ ರಸಾಯನಶಾಸ್ತ್ರದ ಮೊದಲ 15 ಪ್ರಶ್ನೆ ಗಳು Application level ನಲ್ಲಿ ಇವೆ. ಅಂದರೆ JEE, CET type ಬಂದಿದೆ. ಅತೀ ಹೆಚ್ಚು ಅಭ್ಯಾಸ ಮಾಡಿದವರು ( ಬಹಳ ಬುದ್ಧಿವಂತರು) ಕೂಡಾ ಕೇವಲ 4 ಪ್ರಶ್ನೆ ಅಟೆಂಡ್ ಮಾಡಬಹುದು ಅಷ್ಟೆ.

ಇಂತಹ ಸ್ವ ಪ್ರತಿಷ್ಠೆ, ಹೆಚ್ಚು ಜ್ಞಾನಿಗಳನ್ನು ಪ್ರಶ್ನೆ ಪತ್ರಿಕೆ ಸಿದ್ದಪಡಿಸುವ ಕಾರ್ಯದಿಂದ ಹೊರಗಿಡಬೇಕು  ಜತೆಗೆ ಈ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿರುವವರಿಗೆ ದ್ವಿತೀಯ ಪಿಯುಸಿ ಬೋರ್ಡ್ ನಲ್ಲಿ ಪಾಠ ಮಾಡಿ ಅನುಭವವಿದೆಯೇ ಎಂದು ತೇಜೇಶ್ ಪ್ರಶ್ನಿಸಿದರು.

ಕೂಡಲೇ ಇಲಾಖೆಯು ರಾಜ್ಯವ್ಯಾಪ್ತಿ ಮಾಹಿತಿ ಪಡೆದುಕೊಂಡು ವಿದ್ಯಾರ್ಥಿಗಳಿಗೆ ಒಟ್ಟು 15 MCQ ಪ್ರಶ್ನೆಗಳಿಗೆ ಕನಿಷ್ಠ ಪಕ್ಷ 5-10 ಕೃಪಾಂಕ ನೀಡಿ, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

CET/JEE ಬೇರೆಯೇ ಪರೀಕ್ಷೆ ಇರುವಾಗ ಆ ಮಟ್ಟಕ್ಕೆ ಪ್ರಶ್ನೆಪತ್ರಿಕೆಯನ್ನು ತಯಾರಿಸುವುದು ನಿಜಕ್ಕೂ ಸರಿಯಲ್ಲ

ಸರ್ಕಾರದ ಆಶಯಕ್ಕೆ ಧಕ್ಕೆ ತರುವಂತಹ ಪ್ರಶ್ನೆಪತ್ರಿಕೆ ಮಾಡಿದ ರಸಾಯನಶಾಸ್ತ್ರ ತಜ್ಞರಿಗೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.