ಪ್ರಶಿಕ್ಷಣಾರ್ಥಿಗಳು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿ -ಡಾ.ಪಿ.ರವೀಂದ್ರನಾಥ್

ಮೈಸೂರು: ಪೊಲೀಸ್ ಇಲಾಖೆಗೆ ಸೇರುವ ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ಷಮತೆ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ವೃತ್ತಿಪರತೆ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರು ತರಬೇತಿ ಕೇಂದ್ರದ ಪೊಲೀಸ್ ಮಹಾನಿರ್ದೇಶಕ ಡಾ.ಪಿ.ರವೀಂದ್ರನಾಥ್ ಎಂದು ತಿಳಿಸಿದರು.

ಮೈಸೂರಿನ ಜ್ಯೋತಿನಗರದಲ್ಲಿರುವ ಡಿಎಆರ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಕಾನ್ಸಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ವೀಕ್ಷಿಸಿ,ಬಹುಮಾನ ವಿತರಿಸಿ ಅವರು ಮಾತನಾಡಿದರು.

ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಮಾನಸಿಕ ಧೈರ್ಯ, ದೈಹಿಕ ಸದೃಢತೆ ಮತ್ತು ಪರಿಸ್ಥಿತಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಮನೋಬಲವಿರಬೇಕು. ಶಿಸ್ತು, ಸಂಯಮ, ಕಾನೂನುಗಳನ್ನು ಪಾಲಿಸಿ, ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕರ್ತವ್ಯಪ್ರಜ್ಞೆ ಮೆರೆಯಬೇಕು ಎಂದು ತಿಳಿ ಹೇಳಿದರು.

ಪೊಲೀಸ್ ತರಬೇತಿ ಶಾಲೆ ಮೈಸೂರು ೮ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್ ಸ್ಟೇಬಲ್ ರೈಲ್ವೇಸ್ ಮತ್ತು ಕೆಎಸ್ ಐ ಎಸ್ ಎಫ್ ಪ್ರಶಿಕ್ಷಣಾರ್ಥಿಗಳ ಮತ್ತು ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ಮೈಸೂರು ನಗರ ೪ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್ಸಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ನಡೆಯಿತು.

ಅತ್ಯುತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ಗಂಗೇ ಹೆಚ್.ಎಸ್ ಅವರಿಗೆ ನೀಡಲಾಯಿತು.

ಒಳಾಂಗಣ ಪ್ರಶಸ್ತಿಯಲ್ಲಿ ಪ್ರಥಮಸ್ಥಾನವನ್ನು ಗಂಗೇ ಹೆಚ್.ಎಸ್ ಮಹಿಳಾ ಪಿಸಿ ಉತ್ತರ ವಿಭಾಗ ಬೆಂಗಳೂರು, ದ್ವಿತೀಯ ಸ್ಥಾನವನ್ನು ಸೌಂದರ್ಯ ಎಸ್.ಎಂ ಮಹಿಳಾ ಪಿಸಿ ಬೆಂಗಳೂರು ನಗರ, ತೃತೀಯ ಸ್ಥಾನವನ್ನು ಶಿಲ್ಪಶ್ರೀ. ಕೆ  ಮಹಿಳಾ ಪಿಸಿ ಮಂಡ್ಯ ಜಿಲ್ಲೆ ಇವರಿಗೆ‌ ಲಭಿಸಿತು.

ಹೊರಾಂಗಣ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನ ವಿಜಯಕುಮಾರಿ ಮಹಿಳಾ ಪಿಸಿ ಬಳ್ಳಾರಿ ಜಿಲ್ಲೆ, ದ್ವಿತೀಯ ಸ್ಥಾನ ಪವಿತ್ರ ಮಹಿಳಾ ಪಿಸಿ ರಾಯಚೂರು ಜಿಲ್ಲೆ, ತೃತೀಯ ಸ್ಥಾನ ಚಾಂದಿನಿ ಹೆಚ್.ಆರ್ ಮಹಿಳಾ ಪಿಸಿ ಮಂಡ್ಯ ಜಿಲ್ಲೆ.

ಫೈರಿಂಗ್ ನಲ್ಲಿ ಪ್ರಥಮಸ್ಥಾನ ಪೂಜಾ ಎಂ.ಎಸ್ ಮಹಿಳಾ ಪಿಸಿ ಬೆಂಗಳೂರು ನಗರ, ದ್ವಿತೀಯ ಸ್ಥಾನ ಶಿಲ್ಪ ಬಿ.ಎಂ ಮಹಿಳಾ ಪಿಸಿ ಬೆಂಗಳೂರು ನಗರ, ತೃತೀಯ ಸ್ಥಾನ ಶ್ವೇತ ಮಹಿಳಾ ಪಿಸಿ ಬೀದರ್ ಜಿಲ್ಲೆ ಇವರುಗಳು ಪಡೆದುಕೊಂಡರು.

೪ನೇ ತಂಡದ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳಲ್ಲಿ ಒಳಾಂಗಣ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನ ವೈದಿಕ ಕೆ.ಆರ್ ಬೆಂಗಳೂರು, ದ್ವಿತೀಯ ಸ್ಥಾನ ಶ್ವೇತಾ ಅಲಗೌಡ ಬೆಂಗಳೂರು, ತೃತೀಯ ಸ್ಥಾನ ರಂಜಿನಿ ಟಿ ಪಡೆದುಕೊಂಡರು.

ಹೊರಾಂಗಣ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನ ಸುಗುಣ ಎನ್. ಆರ್ ಬೆಂಗಳೂರು, ದ್ವಿತೀಯ ಸ್ಥಾನ ಅಂಜುಂ ತೇರದಾಳ ಬೆಂಗಳೂರು, ಪವಿತ್ರ ಹೆಚ್.ಬಳ್ಳಾರಿ ತೃತೀಯ ಸ್ಥಾನ ಪಡೆದುಕೊಂಡರು.

ರೈಫಲ್ ಶೂಟಿಂಗ್ ಪ್ರಥಮ ಸ್ಥಾನ ದಿವ್ಯ ಹೆಚ್.ವಿ.ಬೆಂಗಳೂರು, ದ್ವಿತೀಯ ಸ್ಥಾನ ಸಿಮ್ರನ್ .ಎ ಬೆಂಗಳೂರು, ತೃತೀಯ ಸ್ಥಾನ ಸಾವಿತ್ರಿ ಕೆಂಚರೆಡ್ಡಿ ಬೆಂಗಳೂರು ಇವರಿಗೆ ಲಭ್ಯವಾಯಿತು

ಸರ್ವೋತ್ತಮ ಪ್ರಶಸ್ತಿ ವೈದಿಕ ಕೆ.ಆರ್.ಬೆಂಗಳೂರು ಇವರಿಗೆ ಸಿಕ್ಕಿದೆ.

ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಮಧುಕರ್ ಪವಾರ್, ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಗೀತ ಎಂ.ಎಸ್, ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಮಾರುತಿ .ಎ. ಮತ್ತಿತರರು ಉಪಸ್ಥಿತರಿದ್ದರು.