ಬ್ರಾಹ್ಮಣರಿಗೆ ಜೀವಿತಾವಧಿ ಜಾತಿ ಪ್ರಮಾಣಪತ್ರ ನೀಡಲು ಆಗ್ರಹ

ಮೈಸೂರು: ಬ್ರಾಹ್ಮಣರಿಗೆ ಜೀವಿತಾವಧಿ ಜಾತಿ ಪ್ರಮಾಣಪತ್ರ ನೀಡಬೇಕು ಮತ್ತು EWS ಮಾನದಂಡ ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿ ಮೈಸೂರಿನಲ್ಲಿ ಮೈಸೂರು ಬ್ರಾಹ್ಮಣ ಯುವ ವೇದಿಕೆ‌‌ ಸದಸ್ಯರು ಅಂಚೆ ಚಳವಳಿ ಮಾಡಿ ಗಮನ ಸೆಳೆದರು.

ರಾಮಸ್ವಾಮಿ ವೃತ್ತದಿಂದ ಕಂದಾಯ ಇಲಾಖೆ ವರೆಗೆ ಮೈಸೂರು ಬ್ರಾಹ್ಮಣ ಯುವ ವೇದಿಕೆ‌‌ ಸದಸ್ಯರು ಅಂಚೆ ಚಳವಳಿ

ನಡೆಸಿದರು.

ಈ ವೇಳೆ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ಮಾತನಾಡಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜಾತಿಯವರಿಗೆ ಶೇ.10 ಮೀಸಲಾತಿ ಅಡಿಯಲ್ಲಿ ಸರಿಸಮಾರು 144 ಜಾತಿಗಳನ್ನ ಗುರುತಿಸಿದ್ದು ಅದರಲ್ಲಿ ಬ್ರಾಹ್ಮಣ ಜನಾಂಗವೂ ಸಹ ಒಂದು ಎಂದು ಹೇಳಿದರು.

ಆದರೆ ಕರ್ನಾಟಕದಲ್ಲಿ ಶೇ.10 ಮೀಸಲಾತಿ ಯೋಜನೆ ಬ್ರಾಹ್ಮಣ ಜನಾಂಗಕ್ಕೆ  ತಲುಪಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದರಿಂದ ಬ್ರಾಹ್ಮಣ ಸಮುದಾಯದ ಯುವಕರಿಗೆ ಶಿಕ್ಷಣ, ಉದ್ಯೋಗ, ಮತ್ತು ಹಿರಿಯರಿಗೆ ಆರೋಗ್ಯ ಸೇರಿದಂತೆ ಅರ್ಚಕರು ಪುರೋಹಿತರು, ಅಡುಗೆಯವರು, ಸ್ವಂತ ಉದ್ಯಮಿಗಳು ಎಲ್ಲರಿಗೂ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಬೇರೆ ರಾಜ್ಯಗಳಲ್ಲಿ ಕೇವಲ ವ್ಯಕ್ತಿಯ ವಾರ್ಷಿಕ ಆದಾಯ 8ಲಕ್ಷದೊಳಗಿರಬೇಕೆಂದು ಕಾನೂನು ತಂದಿರುವ ಹಾಗೆ ಏಕರೂಪ ನೀತಿ ಮಾರ್ಗಸೂಚಿಯನ್ನ ಕರ್ನಾಟಕದಲ್ಲೂ ಜಾರಿಗೆ ತರಬೇಕಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಜಾತಿಯವರಿಗೆ ನೀಡುವ ಜಾತಿ ಪ್ರಮಾಣ ಪತ್ರದ ಮಾದರಿಯಲ್ಲೇ ಬ್ರಾಹ್ಮಣ ಜನಾಂಗದವರಿಗೂ ಸಹ ಜೀವಿತಾವಧಿ ಜಾತಿಪ್ರಮಾಣ ಪತ್ರ ನೀಡಬೇಕಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಬ್ರಾಹ್ಮಣ ಮಂಡಳಿ ಸದಸ್ಯ ಎಂ.ಆರ್ ಬಾಲಕೃಷ್ಣ ಮಾತನಾಡಿ ಕಂದಾಯ ಇಲಾಖೆ ಅಧಿಕಾರಿಗಳು ಬ್ರಾಹ್ಮಣ ಸಮುದಾಯಕ್ಕೆ 10% ಮೀಸಲಾತಿ ತಲುಪಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಗೌರವಾಧ್ಯಕ್ಷ ಮುಳ್ಳೂರು ಗುರುಪ್ರಸಾದ್, ಅಧ್ಯಕ್ಷ ಹೆಚ್ ಎನ್  ಶ್ರೀಧರಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಮ್ ಅಯ್ಯಂಗಾರ್, ಸಂಘಟನಾ‌ ಕಾರ್ಯದರ್ಶಿ  ಅಜಯ್ ಶಾಸ್ತ್ರಿ, ಕಡಕೊಳ ಜಗದೀಶ್, ವಿಜಯ್ ಕುಮಾರ್, ಪ್ರದೀಪ್ ಭಾರದ್ವಾಜ್, ಪ್ರಶಾಂತ್, ಮಿರ್ಲೆ ಪಣೀಶ್, ಶ್ರೀಕಾಂತ್ ಕಶ್ಯಪ್, ಸುಚೀಂದ್ರ, ಪುನೀತ್, ವಿಕಾಸ್ ಶಾಸ್ತ್ರಿ, ಹೊಯ್ಸಳ ಕರ್ನಾಟಕ ಸಂಘದ  ರಂಗನಾಥ್ , ಚಕ್ರಪಾಣಿ, ವಿಜಯನಗರ ಬ್ರಾಹ್ಮಣ ಸಂಘದ ಗುರುಪ್ರಸಾದ್, ವಿಪ್ರ ಜಾಗೃತಿ ವೇದಿಕೆಯ ಮುಳ್ಳೂರು ಸುರೇಶ್, ಅರ್ಚಕರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ, ಶ್ರೀನಿವಾಸ್, ವಿಘ್ನೇಶ್ವರ ಭಟ್, ಯೋಗ ನರಸಿಂಹ, ಮಂಜುನಾಥ್, ಕಲ್ಕೆರೆ ನಾಗರಾಜ್, ಅಪೂರ್ವ ಸುರೇಶ್, ವಿಶ್ವನಾಥ್, ಸುದರ್ಶನ್, ಶ್ರೀನಿವಾಸ್, ವಿ.ಎನ್ ಕೃಷ್ಣ, ರಾಜಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.