ಲಕ್ಷ್ಮೀ ‌ಚಿತ್ರಮಂದಿರದ ಆವರಣದಲ್ಲಿ  ಆಸನಗಳು ಅಗ್ನಿ ಗಾಹುತಿ

ಮೈಸೂರು: ಬೆಳ್ಳಂಬೆಳಿಗ್ಗೆ ಮೈಸೂರಿನ ಲಕ್ಷ್ಮಿ ಚಿತ್ರಮಂದಿರದಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು ನಾಶವಾಗಿದೆ.

ಲಕ್ಷ್ಮೀ ‌ಚಿತ್ರಮಂದಿರದ ಆವರಣದಲ್ಲಿ  ಇಡಲಾಗಿದ್ದ ಆಸನಗಳು ಅಗ್ನಿ ಗಾಹುತಿಯಾಗಿದೆ.

ಚಿತ್ರಮಂದಿರಕ್ಕೆ ಸಂಬಂಧಪಟ್ಟವರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ.

ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಅಗ್ನಿ‌ ಶಾಮಕ ದಳದವರು ಅಗ್ನಿ ಆರಿಅಇ ಭಾರಿ  ಅನಾಹುತ ತಪ್ಪಿಸಿದ್ದಾರೆ.

ಕೋವಿಡ್ ದೇಶಾದ್ಯಂತ ಹರಡಿದಾಗ ಎಲ್ಲಾ ಉದ್ಯಮಕ್ಕೂ ಹೊಡೆತ ಬಿದ್ದಿತ್ತು.ಆಗ ಈ  ಚಿತ್ರಮಂದಿರವೂ ಸ್ಥಗಿತಗೊಂಡಿತ್ತು.

ಕೆಲವು ದಿನಗಳ ಹಿಂದೆ ಚಿತ್ರಮಂದಿರ ನೆಲಸಮ ಕೆಲಸವೂ ಆರಂಭವಾಗಿತ್ತು.

ಚಿತ್ರಮಂದಿರದಲ್ಲಿ ಅಳವಡಿಸಲಾಗಿದ್ದ ಆಸನಗಳನ್ನ ಆವರಣದಲ್ಲಿ ರಾಶಿ ಹಾಕಲಾಗಿತ್ತು.

ಶನಿವಾರ ಬೆಳಿಗ್ಗೆ ವೆಲ್ಡಿಂಗ್ ಕಾರ್ಯ ನಡೆಯುವ ವೇಳೆ ಬೆಂಕಿಯ ಕಿಡಿ ಆಸನಗಳ ರಾಶಿ ಮೇಲೆ ಬಿದ್ದು ಬೆಂಕಿ ವ್ಯಾಪಿಸಿದೆ.

ಸರಿಯಾದ ಸಮಯಕ್ಕೆ ಅಗ್ನಿಶಾಮಕ ಸಿಬ್ಬಂದಿ ದಾವಿಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದರಿಂದ ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ವ್ಯಾಪಿಸುವುದನ್ನು ತಪ್ಪಿಸಿದ್ದಾರೆ.