ಮೈಸೂರು: ನಮ್ಮ ತಂದೆ ವರುಣಾದಿಂದ ಸ್ಪರ್ಧಿಸುವುದಾದರೆ ನಾನು ಕ್ಷೇತ್ರ ಬಿಟ್ಟುಕೊಡುತ್ತೇನೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನನ್ನ ತಂದೆ ವರುಣಾಗೆ ಬಂದರೆ ನಾನು ಸ್ಪರ್ಧಿಸುವುದಿಲ್ಲ ಸಿದ್ಧರಾಮಯ್ಯ ಅವರ ಪರ ಪ್ರಚಾರ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಸರ್ವೇಯಲ್ಲಿ ನೆಗೆಟಿವ್ ಫಲಿತಾಂಶ ಬಂದಿಲ್ಲ ನಾನು ಎರಡು ಬಾರಿ ಸರ್ವೇ ಮಾಡಿಸಿದ್ದೇನೆ. ಎರಡೂ ಬಾರಿಯೂ ನನ್ನ ಅಪ್ಪನ ಪರವೇ ಫಲಿತಾಂಶ ಬಂದಿದೆ ಎಂದು ಯತೀಂದ್ರ ತಿಳಿಸಿದರು.
ಕೋಲಾರ ಬಿಟ್ಟು ವರುಣಾದಿಂದ ಸ್ಪರ್ಧಿಸುವಂತೆ ಮಾಜಿ ಸಿಎಂ ಸಿದ್ಧರಾಮಯ್ಯಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚನೆ ನೀಡಿರುವುದು ಗೊತ್ತಾಗುತ್ತಿದ್ದಂತೆ ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಲು ಡಾ. ಯತೀಂದ್ರ ಸಿದ್ಧರಾಮಯ್ಯ ಸಿದ್ದರಾಗಿದ್ದಾರೆ.
ಸಿದ್ದು ವರುಣಾದಿಂದಲೋ ಅಥವಾ ಬೇರೆ ಕಡೆ ಸ್ಪರ್ಧಿಸುತ್ತಾರೊ ಕಾದು ನೋಡಬೇಕಿದೆ.

