ಮೈಸೂರು: ಮೈಸೂರಿನ ಕೇಂದ್ರ ಕಾರಾಗೃಹದ ಮೇಲೆ ಮೈಸೂರು ನಗರ ಪೊಲೀಸರು ಧಿಢೀರ್ ದಾಳಿ ಮಾಡಿ ಕೈದಿಗಳಿಗೆ ಹಾಗೂ ಅವರ ಸಹಚರರಿಗೆ ಶಾಕ್ ನೀಡಿದ್ದಾರೆ.
ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿದ ಪೊಲೀಸರು ನಗದು ಹಾಗೂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಮಾರ್ಗದರ್ಶನದಲ್ಲಿ ಡಿಸಿಪಿ ಮುತ್ತುರಾಜ್ ಹಾಗೂ ಎಸ್.ಜಾಹ್ನವಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಗಾಂಜಾ ವ್ಯವಹಾರ ನಡೆಯುತ್ತದೆ ಎಂಬ ಆರೋಪಗಳಿದ್ದವು.
ಅದರಂತೆ ದಾಳಿ ವೇಳೆ ಕಾರಾಗೃಹದಲ್ಲಿ ಸಂಗ್ರಹಿಸಲಾಗಿದ್ದ ಗಾಂಜಾ ಮತ್ತು ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಾಳಿಯಲ್ಲಿ ಮೈಸೂರು ನಗರದ ಎಲ್ಲಾ ಠಾಣೆಯ ಇನ್ಸ್ಪೆಕ್ಟರ್ ಗಳು ಹಾಗೂ ಎಸಿಪಿ ಗಳು ಭಾಗವಹಿಸಿದ್ದರು.

