ಬಲಿದಾನ ದಿವಸ ಆಚರಿಸಿದ ಯುವ ಭಾರತ್ ಸಂಘಟನೆ

ಮೈಸೂರು: ಯುವ ಭಾರತ್ ಸಂಘಟನೆ ವತಿಯಿಂದ ಬಲಿದಾನ ದಿವಸದ ಅಂಗವಾಗಿ ನಗರದ ನಾರಾಯಣಸ್ವಾಮಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಜೈ ಹಿಂದ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು

ಈ ವೇಳೆ ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಮಾತನಾಡಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಪಡೆಯಲು ಮೈಸೂರಿನಲ್ಲಿ ಹೆಚ್ವು ಹೋರಾಟಗಳು ನಡೆದಿತ್ತು ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರಬಿಂದು ಸುಬ್ಬರಾಯನ ಕೆರೆಯಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ರವರು ಹಚ್ಚಿದ ಹೋರಾಟದ ಕಿಚ್ಚು ಲಕ್ಷಾಂತರ ಭಾರತೀಯರನ್ನ ಸ್ವಾತಂತ್ರ್ಯ ಚಳವಳಿಗಳಲ್ಲಿ ಭಾಗವಹಿಸುವಂತೆ ಪ್ರೇರೆಣೆ ನೀಡಿತು ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಜೋಗಿ ಮಂಜು ಮಾತನಾಡಿ ಭಗತ್ ಸಿಂಗ್, ರಾಜಗುರು, ಸುಖದೇವ್ ರವರ ತ್ಯಾಗ, ಬಲಿದಾನದಿಂದಾಗಿ ಲಕ್ಷಾಂತರ ಭಾರತೀಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡರು.

ನಾವು ಇಂದಿಗೆ ನೆಮ್ಮದಿಯಾಗಿದ್ದೇವೆ ಎಂದರೆ ಭಗತ್ ಸಿಂಗ್ ರಂತಹ ವೀರ ಹುತಾತ್ಮರೇ ಕಾರಣ, ಅಂತ ಮಹನೀಯರ ತ್ಯಾಗವನ್ನು  ಯುವಪೀಳಿಗೆ ಸ್ಮರಿಸಬೇಕು ಎಂದು ಕರೆ ನೀಡಿದರು.

ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ ಮಾತನಾಡಿ ಅಂದು ಜಲಿಯನ್ ವಾಲಬಾಗಿನಲ್ಲಿ ಬ್ರಿಟೀಷರ ವಿರುದ್ಧ ಭಾರತೀಯರ ಸಾಮರ್ಥ್ಯದ ನಿರ್ಣಯದ ಸಮಾವೇಶದ ಸಂದರ್ಭದಲ್ಲಿ  ಬ್ರಿಟಿಷರ ಕುತಂತ್ರದಿಂದ ಗುಂಡೇಟಿನ ಕಾಲ್ತುಳಿತಕಕ್ಕೆ 120ಮಂದಿ ಬಲಿಯಾದರು,

ಆಗ ಅಲ್ಲೊಬ್ಬ 12ವರ್ಷದ ಯುವಕ ಗೋಲಿಬಾರ್ ಕಣ್ಣಾರೆ ಕಂಡನು.ಅವನಲ್ಲಿ ದೇಶಪ್ರೇಮದ ಕಿಚ್ಚು ಹಬ್ಬಿತು.

ನಂತರ ಆತ ಮನೆಗೆ ತೆರಳುವ ವೇಳೆ ಸಾವನ್ನಪ್ಪಿದ ಪ್ರತಿಯೊಬ್ಬರ ರಕ್ತವನ್ನು ಗಾಜಿನ ಬಾಟಲಿನಲ್ಲಿ ತುಂಬಿಕೊಂಡು ಬಿಳಿಯರ ವಿರುದ್ಧ ಸ್ವಾತಂತ್ರ್ಯದ ಸೇಡಿನ ಪ್ರತೀಕಾರ ತೀರಿಸುತ್ತೇನೆ ಇಂಕ್ವಿಲಾಬ್ ಜಿಂದಾಬಾದ್ ಎಂದು ಶಪಥ ಮಾಡಿದ. ಆ ಮಹಾನ್ ವ್ಯಕ್ತಿಯೇ ಭಗತ್ ಸಿಂಗ್ ಎಂದು ವಿವರಿಸಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾನಂದೀಶ್, ಮೂಡ ಸದಸ್ಯ ನವೀನ್ ಕುಮಾರ್, 23ನೇ ವಾರ್ಡಿನ ಅಧ್ಯಕ್ಷರಾದ ಸುರೇಂದ್ರ, ಯುವ ಭಾರತ್ ಸಂಘಟನೆಯ ಸಂಚಾಲಕರಾದ ಶರತ್ ಭಂಡಾರಿ, ಲಿಂಗರಾಜು, ವಿಘ್ನೇಶ್ವರ ಭಟ್, ಸುದರ್ಶನ್, ಸುಚೇಂದ್ರ, ಶ್ರೀನಿವಾಸ್, ವಿಜಯಾನಂದ, ಆನಂದ್, ಸುಕನ್ಯ, ಗೀತಾ, ಪದ್ಮ, ದಿವ್ಯ, ನವೀನ್, ಚರಣ್ ಮತ್ತಿತರರು ಭಾಗವಹಿಸಿದ್ದರು.