ವರುಣಾದಿಂದಲೇ ಸಿದ್ದು ಅದೃಷ್ಟ ಪರೀಕ್ಷೆ

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೊನೆಗೂ ಕ್ಷೇತ್ರ ಕಗ್ಗಂಟು ಪರಿಹಾರವಾಗಿದ್ದು‌, ವರುಣಾ ಕ್ಷೇತ್ರದಿಂದಲೇ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಇನ್ನು ತಿ.ನರಸೀಪುರದಲ್ಲಿ ಮಗ ಸುನಿಲ್ ಬೋಸ್‌ಗೆ ಕೊಕ್ ನೀಡಿ ಅಪ್ಪ ಎಚ್.ಸಿ. ಮಹದೇವಪ್ಪನಿಗೆ ಟಿಕೆಟ್ ನೀಡಲಾಗಿದೆ.

ಪುತ್ರ ಸುನೀಲ್ ಬೋಸ್ ಗೆ ಕ್ಷೇತ್ರ ಬಿಟ್ಟುಕೊಡಲು ಮುಂದಾಗಿದ್ದ ಮಹದೇವಪ್ಪ ಕೊನೆ ಕ್ಷಣದಲ್ಲಿ ತಾವೇ ಸ್ಪರ್ಧೆಗೆ ಇಳಿಯುತ್ತಿದ್ದಾರೆ.

ಸಿದ್ದರಾಮಯ್ಯ- ಮಹದೇವಪ್ಪ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪ್ಲಾನ್ ಮಾಡಲಾಗಿದ್ದು ಮೈಸೂರು ಜಿಲ್ಲೆಯಲ್ಲಿ ಹಳೆ ಜೋಡಿ ಮತ್ತೆ ಮೋಡಿ ಮಾಡುತ್ತಾ ನೋಡಬೇಕಿದೆ.

ನಂಜನಗೂಡು ಕ್ಷೇತ್ರದಿಂದ ಆರ್.ಧೃವ ನಾರಾಯಣ್ ಪುತ್ರ ದರ್ಶನ್ ಧೃವ ನಾರಾಯಣ್ ಗೆ ಟಿಕೆಟ್ ನೀಡಲಾಗಿದೆ.

ಎನ್.ಆರ್.ಕ್ಷೇತ್ರದಿಂದ ತನ್ವೀರ್ ಸೇಠ್ ಗೆ ಟಿಕೆಟ್ ಫಿಕ್ಸ್ ಆಗಿದೆ. ತನ್ವೀರ್ ಸೇಠ್  ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಹೇಳಿ ತನಗೆ ಟಿಕೆಟ್ ಬೇಡ ಎಂದಿದ್ದರು.

ಆಗ ಅವರ ಅಭಿಮಾನಿಯೊಬ್ಬರು ಆತ್ಮಹತ್ಯೆಗೂ ಯತ್ನಿಸಿದ್ದರು. ಇದೀಗ ಕೊನೆಗೂ ತನ್ವೀರ್ ಸೇಠ್‌ಗೆ ಟಿಕೆಟ್ ನೀಡಲಾಗಿದೆ.

ಮೈಸೂರು ಜಿಲ್ಲೆಯ 11 ಕ್ಷೇತ್ರದಲ್ಲಿ 8 ಕ್ಷೇತ್ರಗಳ ಟಿಕೆಟ್ ಫೈನಲ್ ಆಗಿದೆ. ಚಾಮರಾಜ, ಕೃಷ್ಣರಾಜ, ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿಲ್ಲ

ಪಿರಿಯಾಪಟ್ಟಣದಿಂದ ಕೆ.ವೆಂಕಟೇಶ್, ಕೃಷ್ಣರಾಜ‌ನಗರದಿಂದ ಡಿ.ರವಿಶಂಕರ್‌, ಹುಣಸೂರು ಹಾಲಿ ಶಾಸಕ ಎಚ್.ಪಿ.ಮಂಜುನಾಥ್, ಹೆಗ್ಗಡದೇವನಕೋಟೆ ಅನಿಲ್ ಗೆ ಟಿಕೆಟ್ ಪ್ರಕಟಿಸಲಾಗಿದೆ.