ಶನಿವಾರದಿಂದ ಅನ್ನಭಾಗ್ಯ ಯೋಜನೆ ಜಾರಿ -ಕೆ.ಎಚ್ ಮುನಿಯಪ್ಪ

ಬೆಂಗಳೂರು: ಕೊಟ್ಟ ಮಾತಿನಂತೆ ಶನಿವಾರದಿಂದಲೇ ಅನ್ನಭಾಗ್ಯ ಯೋಜನೆ ಜಾರಿ ಮಾಡುತ್ತೇವೆ ಎಂದು ಆಹಾರ ಮತ್ತು ನಾಹರೀಕ ಪೂರೈಕೆ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಅನ್ನಭಾಗ್ಯ ಯೋಜನೆ ಇದೇ ಶನಿವಾರದಿಂದ ಜಾರಿಯಾಗಲಿದೆ. ಅಕೌಂಟ್ ಇಲ್ಲದವರು ಕೂಡಲೇ ಅಕೌಂಟ್ ಮಾಡಿಸಬೇಕು ಎಂದು ತಿಳಿಸಿದರು.

5 ಕೆಜಿ ಅಕ್ಕಿ ಜೊತೆ ಹಣ ಕೊಡುತ್ತೇವೆ, ಒಬ್ಬರಿಗೆ 170 ರೂ ನಂತೆ ಕುಟುಂಬ ಸದಸ್ಯರ ಅಕೌಂಟ್ ಗೆ ಹಣ ಹಾಕುತ್ತೇವೆ ಎಂದು ತಿಳಿಸಿದರು.

8 ಕೆಜಿ ಅಕ್ಕಿ, 2 ಕೆಜಿ ರಾಗಿ ನೀಡಲು ತೀರ್ಮಾನ  ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಜೋಳ ನೀಡಲು ಕ್ರಮ ವಹಿಸಲಾಗುತ್ತದೆ.

ಅಕ್ಕಿ ನೀಡುವ ಬಗ್ಗೆ  ಈಗಲೇ ಸಮಯ  ಹೇಳಲು ಆಗಲ್ಲ, ಅಕ್ಕಿ ಸಂಗ್ರಹಿಸಿ ಶೀಘ್ರವೇ ಹಂಚಿಕೆ ಮಾಡುತ್ತೇವೆ ಎಂದು ಕೆ.ಎಚ್ ಮುನಿಯಪ್ಪ ಸ್ಪಷ್ಟಪಡಿಸಿದರು.