ಬೆಂಗಳೂರು: ರಾಜ್ಯ ಸರ್ಕಾರದ ವರ್ಗಾವಣೆ ದಂಧೆ ದಾಖಲೆಯ ಪೆನ್ ಡ್ರೈವ್ ನನ್ನ ಬಳಿ ಇದೆ. ಸಮಯ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವರ್ಗಾವಣೆ ದಂಧೆ ಬಗ್ಗೆ ನನ್ನ ಬಳಿ ಸಾಕ್ಷ್ಯ ಇದೆ. ಸಮಯ ಬರಲಿ ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಹೆಚ್ ಡಿಕೆ ಮೈ ಪರಚಿಕೊಳ್ಳುವುದು ಬೇಡ ಎಂದಿದ್ದ ಸಚಿವ ದಿನೇಶ್ ಗುಂಡೂರಾವ್ ವಿರುದ್ದ ಕಿಡಿಕಾರಿದ ಅವರು, ನಾನೇಕೆ ಮೈ ಕೈ ಪರಚಿಕೊಳ್ಳಲಿ ಎಂದು ತಿರಿಗೇಟು ನೀಡಿದರು.
ತಾಜ್ ವೆಸ್ಟೆಂಡ್ ಹೋಟೆಲ್ ವಾಸ್ತವ್ಯ ಕುರಿತು ಲೇವಡಿ ಮಾಡಿದ್ದ ಕಾಂಗ್ರೆಸ್ ಗೆ ತಿರುಗೇಟು ನೀಡಿದ ಕುಮಾರಸ್ವಾಮಿ ನಾನೇನು ಕೆ ಎಸ್ ಟಿ ಟ್ಯಾಕ್ಸ್ ಅಂತಾ ಇಟ್ಟುಕೊಂಡಿಲ್ಲ, ನಾನೇನು ಬೀದಿಯಲ್ಲಿ ಹೋಗುವವನಾ, 2 ಅಥವಾ 3 ಲಕ್ಷ ಖರ್ಚು ಮಾಡೋ ಯೋಗ್ಯತೆ ಇಲ್ಲವಾ ಟೆಂಟ್ ನಲ್ಲಿ ಬ್ಲ್ಯೂ ಫಿಲಂ ತೋರಿಸಿ ಬಂದವನಲ್ಲ ನಾನು, ರೌಡಿಗಳಿಗೆ ಎಣ್ಣೆ ಸಪ್ಲೆ ಮಾಡಿ ಬಂದವನಲ್ಲ ಎಂದು ಟಾಂಗ್ ನೀಡಿದರು.

