ಸಿಎಂ ನೇತೃತ್ವದಲ್ಲೇ ವರ್ಗಾವಣೆ ದಂಧೆ-ಎಚ್ ಡಿ ಕೆ ಗಂಭೀರ ‌ಆರೋಪ

ಮೈಸೂರು: ವರ್ಗಾವಣೆ ದಂಧೆ ಸಿಎಂ ನೇತೃತ್ವದಲ್ಲೇ ನಡೆಯುತ್ತಿದೆ ಎಂದು ಮಾಜಿ ಸಿಎಂ ‌ಎಚ್. ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಗುರುವಾರ ಮೈಸೂರಿನಲ್ಲಿ ಮಾಧ್ಯಮ ‌ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ವರ್ಗಾವಣೆ ಆದೇಶ ಆಗುತ್ತದೆ
ತಕ್ಷಣ ಅದು ಬದಲಾವಣೆ ಆಗುತ್ತದೆ ಎಂದು ದೂರಿದರು.

ಸರ್ಕಾರ ನಡೆಯಬೇಕಾದರೆ ವರ್ಗಾವಣೆ ಅನಿವಾರ್ಯ ಆದರೆ ಯಾವ ಅಳತೆಗೋಲು ಇಟ್ಟುಕೊಂಡು ವರ್ಗಾವಣೆ ಮಾಡುತ್ತಿದ್ದೀರಿ
ಇಷ್ಟೊಂದು ಅನುಭವ ಇರುವ ನಿಮಗೆ ಗೊತ್ತಿಲ್ಲವೇನು ಎಂದು ಸಿಎಂ ‌ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಮುಖ ಎಲ್ಲಾ ಹುದ್ದೆಗಳೆಲ್ಲವೂ ದುಡ್ಡಿನಿಂದಲೇ ವರ್ಗಾವಣೆ ಆಗುತ್ತಿವೆ‌ ಎಂದು ದೂರಿದರು.

ಪೆನ್ ಡ್ರೈವ್ ದಾಖಲೆಯನ್ನ ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುವೆ
ಈ ಸರ್ಕಾರ ಏನು ಬೇಕೋ ಎಲ್ಲವನ್ನೂ ಮಾತನಾಡುತ್ತಲೇ ಇರಲಿ ಎಂದು ಹೇಳಿದರು.

ಹಿಟ್ ಅಂಡ್ ರನ್ ಅಂತಾರೆ,
ಅವರು ಹೀಗೆ ಮಾತನಾಡುತ್ತಿರಲಿ ಸಮಯಕ್ಕೆ ಸರಿಯಾಗಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.

ಬಿಜೆಪಿಯವರು ವಿಪಕ್ಷ ಸ್ಥಾನದಲ್ಲಿದ್ದಾರೆ
ನಾವು ಕೂಡ ವಿಪಕ್ಷ‌ ಸ್ಥಾನದಲ್ಲಿ ಇದ್ದೇವೆ
ಬಿಜೆಪಿಯಲ್ಲಿ ಹಲವರು ಸಮರ್ಥ ನಾಯಕರಿದ್ದಾರೆ, ವಿಪಕ್ಷ ನಾಯಕರು ಆಗುವವರು ಅಲ್ಲಿದ್ದಾರೆ ಎಂದು ಹೇಳಿದರು.

ನನ್ನ ಆಸ್ತಿ ಕುರಿತು ಇಂಟರ್‌ನ್ಯಾಷನಲ್‌ ಸಂಸ್ಥೆಯಿಂದ ತನಿಖೆ ನಡೆಸಲಿ ಎಂದು ಕುಮಾರಸ್ವಾಮಿ ಇದೇ ವೇಳೆ ಸವಾಲು ಹಾಕಿದರು.