ಮೈಸೂರು: ಚಂದ್ರಯಾನ 3 ಯಶಸ್ಸಿಗೆ ಮೈಸೂರು ನಗರ ಬಿಜೆಪಿ ಸದಸ್ಯರು ಮಂತ್ರಾಲಯ ರಾಯರ ಮೊರೆ ಹೋಗಿದ್ದಾರೆ.
ಬುಧವಾರ ಮಂತ್ರಾಲಯದಲ್ಲಿ ಬಿಜೆಪಿ ಸದಸ್ಯರು ವಿಶೇಷ ಪೂಜೆ ಹಮ್ಮಿಕೊಂಡಿದ್ದಾರೆ.
ಚಂದ್ರಯಾನ ಯಶಸ್ವಿಗಾಗಿ ಶಾಸಕ ಶ್ರೀ ವತ್ಸ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ
ಈ ವಿಶೇಷ ಪೂಜೆಗಾಗಿ ಮೈಸೂರಿನಿಂದ 82 ಜನ ಬಿಜೆಪಿ ಸದಸ್ಯರು ಮಂತ್ರಾಲಯಕ್ಕೆ ಹೊರಟಿದ್ದಾರೆ.
ಮೈಸೂರು ರೈಲ್ವೆ ನಿಲ್ದಾಣದಿಂದ ಬಿಜೆಪಿ ಮೈಸೂರು ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್ ನೇತೃತ್ವದಲ್ಲಿ ಹೊರಟ ಬಿಜೆಪಿ ಸದಸ್ಯರು ಭಾರತ್ ಮಾತಾಕೀ ಜೈ,ವಂದೇ ಮಾತರಂ ,ಇಸ್ರೂ ವಿಜ್ಞಾನಿಗಳಿಗೆ, ಹಾಗೂ ಪ್ರಧಾನಿ ನರೇಂದ್ರ ಮೋದೀಜೀ ಗೆ ಜೈಕಾರ ಕೂಗಿದರು.

