ಇಸ್ರೋ ಆದಿತ್ಯ ಸೂರ್ಯನೆಡೆಗೆ

ಆಂಧ್ರಪ್ರದೇಶ: ಚಂದ್ರಯಾನ-3 ಯಶಸ್ವಿ ಬಳಿಕ ISRO ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಭಾರತದ ಮೊದಲ ಸೂರ್ಯಯಾನದ ಆದಿತ್ಯ ಎಲ್‌-1 ಮಿಷನ್ ಯಶಸ್ವಿಯಾಗಿ ಲಾಂಚ್ ಆಗಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಮಹತ್ವಕಾಂಕ್ಷೆಯ ಆದಿತ್ಯ ಎಲ್‌-1 ನೌಕೆಯನ್ನ ಇಸ್ರೋ ಉಡಾವಣೆ ಮಾಡಿದೆ.

ಆದಿತ್ಯ ಎಲ್-1 ಹೊತ್ತ ಪಿ ಎಸ್ ಎಲ್ ವಿ C-57 ಸೂರ್ಯನತ್ತ ಹೊರಟಿದೆ.
ಆದಿತ್ಯ ಎಲ್-1 ನೌಕೆ, ಒಟ್ಟು 7 ವೈಜ್ಞಾನಿಕ ಉಪಕರಣಗಳನ್ನ ಹೊತ್ತು ಸೂರ್ಯಶೋಧಕ್ಕೆ ಹೊರಟಿದೆ.

ಇದರಲ್ಲಿ ಮೂರು ಉಪಕರಣಗಳು ಸೂರ್ಯನನ್ನು ನೋಡುತ್ತಾ ವಿವಿಧ ಭಾಗಗಳ ಅಧ್ಯಯನ ಮಾಡುತ್ತವೆ, ಉಳಿದ ಮೂರು ಉಪಕರಣಗಳು, ಸೂರ್ಯನಿಂದ ಬರುವ ವಿಕಿರಣ ಮತ್ತು ವಸ್ತುಗಳನ್ನು ಅಳತೆ ಮಾಡುವ ಕೆಲಸ ಮಾಡುತ್ತವೆ.

ವಿಶೇಷವೆಂದರೆ ಆದಿತ್ಯ ಎಲ್‌-1ನಲ್ಲಿರುವ ಉಪಕರಣಗಳು ಎಲ್‌-1 ಪಾಯಿಂಟ್‌ನಲ್ಲೇ ಸುತ್ತುತ್ತಾ ಕೃತಕ ಗ್ರಹಣ ಕೂಡ ಸೃಷ್ಟಿಸಬಲ್ಲವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.