ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವ 2023ರಲ್ಲಿ ಭಾಗವಹಿಸುವ ಗಜಪಡೆ ಸಾಂಸ್ಕೃತಿಕ ನಗರಿಗೆ ಆಗಮಿಸಿದೆ.
ಮೈಸೂರಿನ ಅಶೋಕಾಪುರಂ ನಲ್ಲಿರುವ ಅರಣ್ಯಭವನದಲ್ಲಿ ಬೀಡುಬಿಟ್ಟಿದೆ.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಅರಣ್ಯಾಧಿಕಾರಿಗಳು ಸ್ವಾಗತಿಸಿದರು.
ಹುಣಸೂರಿನ ವೀರನಹೊಸಹಳ್ಳಿಯಿಂದ ಗಜಪಡೆ ಲಾರಿಗಳಲ್ಲಿ ಮೈಸೂರಿಗೆ ಆಗಮಿಸಿವೆ.
ಅರಣ್ಯ ಭವನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಆನೆಗಳನ್ನು ಬರಮಾಡಿಕೊಳ್ಳಲಾಯಿತು.
ಇಂದಿನಿಂದ ನಾಲ್ಕು ದಿನಗಳು ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡುವ ಗಜಪಡೆ
ಸೆ 5 ರಂದು ಮೈಸೂರು ಅರಮನೆ ಆವರಣಕ್ಕೆ ಬರಲಿವೆ.

