ದೆಹಲಿ: ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಇಡೀ ವಿಶ್ವದಲ್ಲೇ ಜನಪ್ರಿಯರಾಗಿದ್ದಾರೆ.ಇದು ಎಲ್ಲರಿಗೂ ಗೊತ್ತಿರುವಂತಹ ವಿಷಯ.
ಇದೀಗ ಮೋದಿಜಿ ವಾಟ್ಸ್ಆಪ್ ಚಾನಲ್ ನಲ್ಲೂ ಜನಪ್ರಿಯರಾಗಿದ್ದು ಕೇವಲ ಒಂದು ವಾರದಲ್ಲಿ 58 ಲಕ್ಷ ಹಿಂಬಾಲಕರು ಸೇರ್ಪಡೆಯಾಗಿರುವುದು ವಿಶೇಷ.
ಅವರು ಅತ್ಯಂತ ಜನಪ್ರಿಯ ನಾಯಕ ಎಂಬುದು ಮತ್ತೆ ಸಾಬೀತಾಗಿದೆ.
ವಿಶ್ವದ ಅತ್ಯಂತ ಜನಪ್ರಿಯ ನಾಯಕರಲ್ಲಿ ನಮ್ಮ ಪ್ರಧಾನಿ ಮತ್ತೆ ಮೊದಲಿಗರಾಗಿ ಹೊಮ್ಮಿದ್ದಾರೆ.
ಅವರು ವಾಟ್ಸಪ್ ಚಾನೆಲ್ ಆರಂಭಿಸಿದ ಕೇವಲ ಒಂದೇ ವಾರದಲ್ಲಿ 52 ಲಕ್ಷ ಫಾಲೋ ವರ್ಸ್ ಆಗಿದ್ದಾರೆ.
ವಾಟ್ಸಾಪ್ ಚಾನೆಲ್ ನಲ್ಲಿ ಅತಿ ಹೆಚ್ಚು ಸಂಖ್ಯೆಯ ಫಾಲೋವರ್ಸ್ ಹೊಂದಿರುವ ವಿಶ್ವದ ನಾಯಕ ಎಂಬ ಮೆಚ್ಚುಗೆಗೂ ಮೋದಿ ಪಾತ್ರರಾಗಿದ್ದಾರೆ.
ಅದಕ್ಕಾಗಿ ಮೋದಿ ಫಾಲೊವರ್ಸ್ ಗಳಿಗೆ ಧನ್ಯವಾದ ಕೂಡ ಸಲ್ಲಿಸಿದ್ದಾರೆ. ನಾವೀಗ 50 ಲಕ್ಷದ ಬಳಗ ಸೇರಿದ್ದೇವೆ, ವಾಟ್ಸಪ್ ಮೂಲಕ ಸಂಪರ್ಕದಲ್ಲಿರುವ ಎಲ್ಲರಿಗೂ ಧನ್ಯವಾದ ಎಂದು ಕೋರಿದ್ದಾರೆ.

