ಒಂದೇ ವಾರದಲ್ಲಿ ಎರಡು ಬಂದ್ ಗಳು ನಡೆಯುವುದು ನಿಶ್ಚಿತ: ನಾಳೆ ಬೆಂಗಳೂರು ಸ್ಥಬ್ದ

ಬೆಂಗಳೂರು: ನಮಗೇ ನೀರಿಲ್ಲದಿರುವಾಗ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಿರುವುದನ್ನು ಖಂಡಿಸಿ ರೈತ ಸಂಘಟನೆಗಳು ಹಾಗೂ ಕಬ್ಬು ಬೆಳೆಗಾರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಮಂಗಳವಾರ ಕರೆಕೊಟ್ಟಿರುವ ಬೆಂಗಳೂರು ಬಂದ್ ಖಚಿತವಾಗಿದೆ ಹಾಗಾಗಿ ಇಡೀ ನಗರ ಸ್ಥಬ್ದವಾಗುವುದಂತೂ ನಿಜ.

ಅದೇ ರೀತಿ ಕನ್ನಡ ಒಕ್ಕೂಟ ಕರೆ ಕೊಟ್ಟಿರುವ ಸೆಪ್ಟೆಂಬರ್ 29ರ ಅಖಂಡ ಕರ್ನಾಟಕ ಬಂದ್ ಕೂಡ ನಡೆಯುವುದು ಅಷ್ಟೇ ನಿಜ.

ಮಂಗಳವಾರ ಯಾವುದೇ ಟ್ಯಾಕ್ಸಿ ಓಲಾ ಊಬರ್ ಸೇವೆ ಇರುವುದಿಲ್ಲ, ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಬೆಂಗಳೂರು ಜಿಲ್ಲಾಧಿಕಾರಿ ದಯಾನಂದ್ ಕೂಡ ಆದೇಶ ನೀಡಿದ್ದಾರೆ ಹಾಗಾಗಿ ಶಾಲಾ ಕಾಲೇಜುಗಳು ಇರುವುದಿಲ್ಲ.

ಒಂದೇ ವಾರದಲ್ಲಿ ಎರಡೆರಡು ಬಂಧುಗಳು ಬೇಕೇ ಬೇಡವೇ ಎಂಬ ಗೊಂದಲಗಳು ಇದ್ದದ್ದು ನಿಜ.

ಹಾಗಾಗಿ ಸೋಮವಾರ ಬೆಳಗ್ಗೆ ಮಂಗಳವಾರ ಬಂದ್ ಕರೆ ಕೊಟ್ಟಿದ್ದ‌ ಕನ್ನಡಪರ ಸಂಘಟನೆಗಳು ಸಭೆ ನಡೆಸಿ ಬಂದ್ ನಡೆಯು ವುದನ್ನು ಖಚಿತಪಡಿಸಿದ್ದಾರೆ.

ಅದೇ ರೀತಿ ಕನ್ನಡ ಒಕ್ಕೂಟದ ಮುಖ್ಯಸ್ಥ ವಾಟಳ್ ನಾಗರಾಜ್ 29ರಂದು ಕರ್ನಾಟಕ ಬಂದ್ ಮಾಡುವುದು ಸತ್ಯ ಎಂದು ತಿಳಿಸಿದ್ದಾರೆ. ಹಾಗಾಗಿ ಒಂದೇ ವಾರದಲ್ಲಿ ಎರಡು ಬಂಗಳನ್ನು ಅನಿವಾರ್ಯವಾಗಿ ಜನರು ಎದುರಿಸಲೇ ಬೇಕಾಗಿದೆ.

ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ವಾಟಾಳ್ ನಾಹರಾಜ್ ಮಾತನಾಡಿ ಯಾವುದೇ ಕಾರಣಕ್ಕೂ ಕರ್ನಾಟಕ ಬಂದ್ ಇರುವುದನ್ನು ಹಿಂದಕ್ಕೆ ಪಡೆಯುವುದಿಲ್ಲ ಬಂದ್ ಆಗುವುದು ನಿಶ್ಚಿತ ಎಂದು ಸ್ಪಷ್ಟಪಡಿಸಿದರು.