ಮೈಸೂರು: ಮಹಿಷಾ ದಸರಾ ವಿರೋಧಿಸಿ ಬಿಜೆಪಿ ಅ.13 ರಂದು ಚಾಮುಂಡಿಬೆಟ್ಟ ಚಲೋ ಜಾಥಾ ಹಮ್ಮಿಕೊಂಡಿದ್ದು ಸಂಘರ್ಷವಾದರೂ ಸರಿ ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಅಪವಿತ್ರ ಮಾಡುವವರನ್ನ ತಡೆಯೋಣ ಎಂದು ಸಂಸದ ಕರೆ ನೀಡಿದ್ದಾರೆ.
ಚಾಮುಂಡಿಬೆಟ್ಟ ಚಲೋ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ವಾರ್ಡ್ ವಾರು ಪೂರ್ವಭಾವಿ ಸಭೆ
ನಡೆಸುತ್ತಿದ್ದು,ಮಂಗಳವಾರ ತಿಲಕ್ ನಗರದ ವಾರ್ಡ್ ಸಭೆ ನಡೆಸಿ ಮಾತನಾಡಿದರು.
ಅ.13 ರಂದು ನಡೆಯಲಿರುವ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರಬೇಕು. ಮಹಿಷಾ ದಸರಾ ಎಂಬ ಅನಾಚಾರವನ್ನು ಎಲ್ಲರೂ ಸೇರಿ ತಡೆಯಬೇಕು ಕರೆ ಕೊಟ್ಟರು.
ಅ.13 ರಂದು ಬೆಳಗ್ಗೆ 8 ಗಂಟೆಗೆ ತಾವರೆಕಟ್ಟೆ ಬಳಿ ಎಲ್ಲರೂ ಸೇರಿ ಬೆಟ್ಟಕ್ಕೆ ಹೋಗೋಣ, ಮಹಿಷಾ ಪ್ರತಿಮೆಯ ಬಳಿ ಎಲ್ಲರೂ ಕೂರೋಣ. ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ನಡೆಸುವ ಅನಾಚಾರವನ್ನ ಮಟ್ಟಹಾಕೋಣ ಎಂದು ಪ್ರತಾಪ್ ಸಿಂಹ ತಿಳಿಸಿದರು.
ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯರು ಸಭೆಯಲ್ಲಿ ಉಪಸ್ಥಿತರಿದ್ದರು.

