ಮಾಜಿ ಕಾರ್ಪೊರೇಟರ್​ ಅಶ್ವತ್ಥಮ್ಮ ಅವರ ಬಾಮೈದನ ಮನೆ ಮೇಲೆ ಐಟಿ ದಾಳಿ:40 ಕೋಟಿಗೂ ಅಧಿಕ ಹಣ ಪತ್ತೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಬೇಟೆ ಮುಂದುವರೆದಿದೆ.

ಮಾಜಿ ಕಾರ್ಪೊರೇಟರ್​ ಅಶ್ವತ್ಥಮ್ಮ ಅವರ ಬಾಮೈದ ಪ್ರದೀಪ್ ಮನೆ ದಾಳಿ ನಡೆಸಲಾಗಿದೆ.

ಅಶ್ವತ್ಥಮ್ಮ ಪತಿ ಅಂಬಿಕಾಪತಿ ಸಹೋದರ ಪ್ರದೀಪ್ ​ಗೆ ಸೇರಿದ ಫ್ಲ್ಯಾಟ್​ನ ಬೆಡ್​​ ರೂಮ್​ನಲ್ಲಿ 23 ಬಾಕ್ಸ್​​ನಲ್ಲಿ 40 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ.

ಐಟಿ ಅಧಿಕಾರಿಗಳು ಪ್ರದೀಪ್​ನನ್ನು ವಿಚಾರಣೆ ನಡೆಸುತ್ತಿದ್ದಾರೆ.

ಅಶ್ವತ್ಥಮ್ಮ ಪತಿ ಅಂಬಿಕಾಪತಿಗೆ ಸೇರಿದ ಕಚೇರಿಗಳಲ್ಲೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 

ಅಶ್ವತ್ಥಮ್ಮ, ಪತಿ ಅಂಬಿಕಾಪತಿ ಹಾಗೂ ಪ್ರದೀಪ್ ಅವರುಗಳ ಬ್ಯಾಂಕ್ ಖಾತೆಗಳ ಲಾಕರ್ ಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಪತ್ತೆಯಾದ ಹಣದ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.