ಮೈಸೂರು: ಪ್ರೊ ಕೆ ಎಸ್ ಭಗವಾನ್ ಅವರ ಹೇಳಿಕೆ ಖಂಡಿಸಿ ನಿವಾಸದ ಬಳಿ ಒಕ್ಕಲಿಗ ಸಮುದಾಯದವರು ಭಾರೀ ಪ್ರತಿಭಟನೆ ನಡೆಸಿದರು.
ಮೈಸೂರಿನ ಕುವೆಂಪುನಗರದಲ್ಲಿರುವ ಭಗವಾನ್ ನಿವಾಸದ ಮುಂದೆ ಜಮಾಯಿಸಿದ ಒಕ್ಕಲಿಗ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಭಗವಾನ್ ಯಾವ ಸಮುದಾಯಕ್ಕೆ ಹುಟ್ಟಿರುವು ಎಂಬುದನ್ನು ಹೇಳಲಿ ಎಂದು ಏಕವಚನದಲ್ಲಿ ವಾಗ್ದಾಳಿ ಹೇಳಲೇಬೇಕೆಂದು ಪಟ್ಟು ಹಿಡಿದರು.
ನಮಗೆ ಸಂಸ್ಕೃತಿ ಇಲ್ಲಾ ಎಂದಿದ್ದಾರೆ,
ಭಗವಾನ್ ಬಂದು ಸಂಸ್ಕೃತಿ ಪಾಠ ಹೇಳಲಿ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಭಗವಾನ್ ನಿವಾಸದ ಮುಂದೆ ಧರಣಿ ಕುಳಿತ ಪ್ರತಿಭಟನಾಕಾರರನು ಪೋಲೀಸರು ತಡೆದರು.
ಆದರೆ ಪ್ರತಿಭಟನಾ ನಿರತರು ರಸ್ತೆಯಲ್ಲೇ ಕುಳಿತು ಭಗವಾನ್ ಗಡಿಪಾರು ಮಾಡುವಂತೆ ಆಗ್ರಹಿಸಿದರು.
ಜತೆಗೆ ಭಗವಾನ್ ನಿವಾಸಕ್ಕೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಅಡ್ಡಗಟ್ಟಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದರು.
ಈ ಸಂದರ್ಭದಲ್ಲಿ ಗಿರೀಶ್ ಎಂಬುವರ ಮುಖಕ್ಕೆ ಪೆಟ್ಟು ಬಿದ್ದು ರಕ್ತ ಸುರಿದಿದ್ದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಅರಿತು ವಶಕ್ಕೆ ಪಡೆದಿದ್ದ ಎಲ್ಲರನ್ನೂ ಪೊಲೀಸ್ ವಾಹನದಿಂದ ಕೆಳಗೆ ಇಳಿಸಲಾಯಿತು.
ನಂತರ ರಸ್ತೆ ಮಧ್ಯೆ ಕುಳಿತು ನೂರಾರು ಮಂದಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಪ್ರೊ.ಕೆ.ಎಸ್.ಭಗವಾನ್ ಮನೆ ಎದುರು ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ
ಶುಕ್ರವಾರ ಮಹಿಷ ಉತ್ಸವ ಕಾರ್ಯಕ್ರಮದ ವೇಳೆ ಭಾಷಣ ಮಾಡಿದಾಗ
ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ಹೇಳಿ,
ಬಳಿಕ ಇದನ್ನು ಹೇಳಿದ್ದು ಕುವೆಂಪು ಅವರು ನಾನು ಹೇಳುತ್ತಿರುವುದಲ್ಲ ಎಂದಿದ್ದರು.
ಭಗವಾನ್ ಅವರ ಹೇಳಿಗೆ ಕಿಡಿ ಹೊತ್ತಿಸಿದ್ದು,ಅಹಿತಕರ ಘಟನೆ ನಡೆಯದಂತೆ ಸರ್ಪಗಾವಲು ಹಾಕಲಾಗಿದ್ದು
ಮನೆಯ ಪ್ರವೇಶ ದ್ವಾರದವರೆಗೂ ಬ್ಯಾರಿಕೇಡ್ ಗಳನ್ನ ಅಳವಡಿಸಲಾಗಿದೆ ಅಲ್ಲದೆ ರಾಜ್ಯ ಮೀಸಲು ಪಡೆ ಪೊಲೀಸರನ್ನೂ ನಿಯೋಜಿಸಲಾಗಿದೆ

