ನವದೆಹಲಿ: ಸಂಗಾತಿ ಆಯ್ಕೆ ಬದುಕಿನ ಹಕ್ಕಾಗಿದೆ, ಸಲಿಂಗ ವಿವಾಹ ಮಾನ್ಯತೆ ವಿಚಾರವಾಗಿ ಸರ್ಕಾರ ಸಮಿತಿ ರಚಿಸಲಿ ಎಂದು ಸುಪ್ರೀಂಕೋರ್ಟ್ ಸಲಹೆ ನೀಡಿದೆ.
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠ, ನಾವು ಕಾನೂನು ರೂಪಿಸಲು ಆಗುವುದಿಲ್ಲ, ಮಧ್ಯಪ್ರವೇಶಿಸಬಹುದು ಎಂದು ಹೇಳಿದೆ.
ನಾವು ಕಾನೂನಿನ ಕುರಿತು ವ್ಯಾಖ್ಯಾನ ನೀಡಬಹುದು,ಈ ವಿಚಾರದಲ್ಲಿ ವಿಶೇಷ ಮದುವೆ ಕಾಯ್ದೆ ಪ್ರಮುಖ ಪಾತ್ರ ವಹಿಸಲಿದೆ. ಸಲಿಂಗ ಮದುವೆ ಮಾನ್ಯತೆ ಬಗ್ಗೆ ಸಂಸತ್ ನಿರ್ಣಯ ಕೈಗೊಳ್ಳಬಹುದು, ಸಲಿಂಗ ವಿವಾಹ ಮಾನ್ಯತೆ ವಿಚಾರವಾಗಿ ಸರ್ಕಾರ ಸಮಿತಿ ರಚಿಸಲಿ ಎಂದು ಸಲಹೆ ನೀಡಿದೆ.
ಪ್ರೀತಿ ಪ್ರೇಮ ಎಂಬುದು ಮನುಷ್ಯನ ಮೂಲಭೂತ ಹಕ್ಕು, ಸಂಗಾತಿ ಆಯ್ಕೆ ಬದುಕಿನ ಹಕ್ಕು, ತನ್ನ ಸಂಗಾತಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ ಹಾಗಾಗಿ ನಾಗರೀಕರ ಹಕ್ಕುಗಳನ್ನ ಸರ್ಕಾರ ರಕ್ಷಣೆ ಮಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.

