ಮೈಸೂರು: ಇದುವರೆಗೂ ನಮ್ಮ ಹೈಕಮಾಂಡ್ ನಯಾ ಪೈಸೆ ಹಣವನ್ನ ಕೇಳಿಲ್ಲ,ಬಿಜೆಪಿ ಮಾಡುತ್ತಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಬಿಜೆಪಿಯವರ ಆರೋಪಗಳೆಲ್ಲ ನಿರಾಧಾರ ಎಂದು ಹೇಳಿದರು.
ಗುತ್ತಿಗೆದಾರನನ್ನ ಬಿಜೆಪಿ, ಕಾಂಗ್ರೆಸ್ ನೋರು ಅಂತ ಹೇಳೊದಕ್ಕೆ ಆಗುತ್ತಾ,
ಈಗ ನಾನು ಅವನು ಬಿಜೆಪಿ ಗುತ್ತಿಗೆದಾರ ಅಂತಾ ಹೇಳುತ್ತೇನೆ ಅದನ್ನ ಯಾರಾದರೂ ಒಪ್ಪಿಕೊಳ್ಳುತ್ತಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
5 ರಾಜ್ಯ ಚುನಾವಣೆಗೂ ನಮಗೂ ಏನೂ ಸಂಬಂಧ,ನಾವೆನಾದರೂ ನಮ್ಮ ಚುನಾವಣೆಗೆ ಹೋಗಿ ಯಾರನ್ನಾದರೂ ಕೇಳಿದ್ದೀವಾ,ಈಗ ಅವರಿಗೆ ಕೊಡಬೇಕು ಇವರಿಗೆ ಕೊಡಬೇಕು ಎಂಬುದರಲ್ಲಿ ಅರ್ಥವೇ ಇಲ್ಲ,ಬಿಜೆಪಿಯವರು ಸುಖಾ ಸುಮ್ಮನೇ ಆರೋಪ ಮಾಡುತ್ತಾರೆ ಎಂದು ಗರಂ ಆಗಿ ನುಡಿದರು.
ಇದು ಸರ್ಕಾರದ ದುಡ್ಡು ಅಂಥ ಐಟಿ ಏನಾದರೂ ಹೇಳಿದಿಯಾ
ಐಟಿ ಏನಾದರೂ ಸರ್ಕಾರದ ಮೇಲೆ ಆರೋಪ ಮಾಡಿದಿಯಾ,ಇದರ ಬಗ್ಗೆ ನಾವೇಕೆ ತನಿಖೆ ಮಾಡಬೇಕು ಎಂದು ಪ್ರಶ್ನಿಸಿದರು.

