ಕಲಬುರಗಿ: ಕುರಿ ಫಾರ್ಮ್ನಲ್ಲಿ ಗಾಂಜಾ ಪತ್ತೆ ಪ್ರಕರಣ ಸಂಬಂಧ ಪಿಎಸ್ ಐ ಸೇರಿ ನಾಲ್ವರನ್ನು ಅಮಾನತು ಮಾಡಲಾಗಿದೆ.
ಕಾಳಗಿ ಠಾಣೆ ಪಿಎಸ್ಐ ಪಿಎಸ್ಐ ಬಸವರಾಜ ಚಿತಕೋಟೆ, ಎಎಸ್ಐ ನೀಲಕಂಠಪ್ಪ ಹೆಬ್ಬಾಳ ಮತ್ತು ಬೀಟ್ ಪೆÇಲೀಸ್ ಕಾನ್ಸ್ ಟೇಬಲ್ ಗಳಾದ ಶರಣಪ್ಪ ಹಾಗೂ ಅನಿಲ್ ಭಂಡಾರಿ ಅಮಾನತ್ತಿಗೆ ಒಳಗಾದವರು.
ಕಲಬುರಗಿಯ ಕಾಳಗಿ ಬಳಿಯ ಲಕ್ಷ್ಮಣನಾಯಕ ತಾಂಡಾದ ಕುರಿ ಫಾರ್ಮ್ ಹೌಸ್ ನಲ್ಲಿ 6 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆಯಾದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಕಾರಣದಿಂದ ಈ ನಾಲ್ವರನ್ನು ಅಮಾನತುಗೊಳಿಸಿ ಎಸ್ ಪಿ ಸಿಮಿ ಮರಿಯಮ್ ಜಾರ್ಜ್ ಆದೇಶ ಹೊರಡಿಸಿದ್ದಾರೆ.
ಗಾಂಜಾ ಪತ್ತೆ: ಪಿಎಸ್ಐ ಸೇರಿ ನಾಲ್ವರು ಪೆÇೀಲೀಸ್ ಅಧಿಕಾರಿಗಳ ಅಮಾನತು
