ಇಬ್ಬರ‌ ಜಗಳ ಮೂರನೆಯವರಿಗೆ ಲಾಭ: ಗೌತಮ್‌ಗೆ ಕೋಲಾರ ಕಾಂಗ್ರೆಸ್ ಟಿಕೆಟ್

ಬೆಂಗಳೂರು: ಕೋಲಾರ ಕಾಂಗ್ರೆಸ್  ಟಿಕೆಟ್ ಫೈನಲ್ ಆಗಿದ್ದು, ಅಭ್ಯರ್ಥಿಯಾಗಿ ಕೆ.ವಿ ಗೌತಮ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ.

ಕೆ.ವಿ ಗೌತಮ್ ಅವರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಎರಡು ಬಣಗಳ ನಡುವಿನ ಜಗಳಕ್ಕೆ ಬ್ರೇಕ್ ಹಾಕಿದೆ.

ಸಚಿವ ಮುನಿಯಪ್ಪ ಮತ್ತು ಉಳಿದ ನಾಯಕರ ಜಗಳದ ಹಿನ್ನೆಲೆ 3ನೇ ಅಭ್ಯರ್ಥಿಗೆ ಲಾಭವಾದಂತಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಎಂ.ಸಿ ಸುಧಾಕರ್, ಹೈಕಮಾಂಡ್ ಘೋಷಣೆ ಮಾಡಿದ ಅಭ್ಯರ್ಥಿಗೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.