ಮೈಸೂರು: ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿನ ನೌಕರರನ್ನು ಖಾಯಂಗೊಳಿಸಬೇಕೆಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿಎಸ್. ಶ್ರೀವತ್ಸ ಒತ್ತಾಯಿಸಿದ್ದಾರೆ.
ಅರಣ್ಯ ಜೀವಿಶಾಸ್ತ್ರ ಪರಿಸರ ಇಲಾಖೆಗೆ ಸಂಬಂಧಿಸಿದಂತೆ ಬೆಳಗಾವಿ ಅಧಿವೇಶನದಲ್ಲಿ
ಶಾಸಕರು ಮಾತನಾಡಿದರು.
ಮೈಸೂರು ಮೃಗಾಲಯದಲ್ಲಿ 356 ಮಂದಿ ನೌಕರರಿದ್ದು ಅದರಲ್ಲಿ 9 ಮಂದಿ ಮಾತ್ರ ಖಾಯಂ ನೌಕರರು, ಅಧಿಕಾರಿಗಳಿದ್ದಾರೆ, ಮೃಗಾಲಯದಲ್ಲಿ ಜೀವವನ್ನೇ ಪಣಕಿಟ್ಟು ದುಡಿಯುವ ನೌಕರರು ಕಳೆದ 11ವರ್ಷಗಳಿಂದ ಶ್ರಮಿಸುತ್ತಿದ್ದಾರೆ, 18ಮಂದಿ ಅನುಕಂಪ ಆಧಾರದ ಮೇರೆಗೆ ದುಡಿಯುತ್ತಿದ್ದು ಒಳಗುತ್ತಿಗೆಯವರಿಗೆ ಮಾಸಿಕ 24 ಸಾವಿರ ವೇತನ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕೆಲಸಗಾರರಿಗೆ ಮಾಸಿಕ 14 ಸಾವಿರ ನಿಗಧಿಪಡಿಸಿದ್ದಾರೆ. ಮೃಗಾಲಯದ ಕಾರ್ಮಿಕ ಜೀವನೋಪಾಯದ ಆರ್ಥಿಕ ಭದ್ರತೆಗಾಗಿ ಕೆಲಸಮಾಡುತ್ತಿರುವ ಎಲ್ಲರನ್ನು ಖಾಯಂಗೊಳಿಸಬೇಕೆಂದು ಮತ್ತು ಸಿಸಿಎಫ್ ಅಧಿಕಾರಿಯನ್ನಾಗಿ ಗುಲ್ಬರ್ಗಾ ವಲಯಕ್ಕೆ ಸಂಬಂಧ ಪಟ್ಟವರಿದ್ದು ಸ್ಥಳೀಯ ಮೈಸೂರು ವಿಭಾಗದವರನ್ನೇ ನೇಮಕ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು,
ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿ 139 ಮಂದಿಯನ್ನ ಕೆಲಸಗಳಿಗೆ ಭರ್ತಿ ಮಾಡಲು ಮಂಜೂರಾತಿ ಇದೆ. ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ, ನ್ಯಾಯಾಲಯದಲ್ಲಿ ಕೆಲವು ಪ್ರಕರಣಗಳ ದಾವೆಗಳು ಮತ್ತು ಆಂತರಿಕ ಒಳಮೀಸಲಾತಿ ವಿಷಯವಾಗಿ ವಿಳಂಬವಾಗಿರುವ ಕಾರಣ ನೇಮಕಾತಿಯಾಗಿಲ್ಲ ಶೀಘ್ರವೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ನೇರನೇಮಕಾತಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

