ಸಿದ್ದರಾಮಯ್ಯ ಹೇಳಿಕೆಗೆ ಜಿಟಿಡಿ ಟೀಕೆ

ಬೆಂಗಳೂರು: 60 ಸಾವಿರ ಮತಗಳ  ಅಂತರದಲ್ಲಿ ಗೆದ್ದರೆ ನನ್ನನ್ನು ಯಾರು ಮುಟ್ಟುವುದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಜಿ.ಟಿ ದೇವೇಗೌಡ ಟೀಕಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ  ಜಿ.ಟಿ ದೇವೇಗೌಡ, ಸಿಎಂ ಬದಲಾವಣೆಯಾಗುತ್ತಾರೆ ಎಂದು ಹಿಂದೆ ಕಾಂಗ್ರೆಸ್ ನವರೇ ಹೇಳುತ್ತಿದ್ದರು. ಎಂಪಿ  ಚುನಾವಣೆಯಲ್ಲಿ ಬಹುಮತ ಬರಲ್ಲ ತಾನು ಬದಲಾಗೋದು ಗ್ಯಾರಂಟಿ ಎಂಬುದು ಸಿಎಂಗೆ ಗೊತ್ತಾಗಿದೆ ಅದಕ್ಕೆ ‌ಏನೊ ಹೇಳುತಗತಾರೆ ಎಂದು ಲೇವಡಿ ಮಾಡಿದರು.

ರಾಜ್ಯದ 28 ಕ್ಷೇತ್ರಗಳ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮಾಲೋಚನೆ ನಡೆಸಲಿದ್ದಾರೆ. ಎರಡೂ ಪಕ್ಷಗಳ ಜೊತೆ ಚರ್ಚಿಸಲಿದ್ದಾರೆ ಎಂದು ಜಿಟಿಡಿ ತಿಳಿಸಿದರು.