ಒಕ್ಕಲಿಗ ಸ್ವಾಮೀಜಿ ದಡ್ಡರಲ್ಲ -ಡಿಕೆಶಿ

ಬೆಂಗಳೂರು: ಬಿಜೆಪಿ, ಜೆಡಿಎಸ್ ನಾಯಕರು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದ ಶ್ರೀಗಳ ಆಶೀರ್ವಾದವನ್ನು ಪಡೆದಿದ್ದಾರೆ.

ಆದರೆ ಮೈತ್ರಿ ನಾಯಕರ ಈ ಭೇಟಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಒಕ್ಕಲಿಗ ಸ್ಬಾಮೀಜಿಯವರು ದಡ್ಡರಲ್ಲ ಎನ್ನುವ ಮೂಲಕ ನಿರ್ಮಲಾನಂದ ಶ್ರೀಗಳ ವಿರುದ್ಧ ಡಿಕೆಶಿ ಪರೋಕ್ಷ ವಾಗ್ದಾಳಿ ನಡೆಸಿದರು.

ಸ್ವಾಮೀಜಿಯವರು ಬಂದವರಿಗೆ ಹಾರ ಹಾಕುತ್ತಾರೆ,ವಿಭೂತಿ ಇಡುತ್ತಾರೆ ಬಳಿಕ ಕಳುಹಿಸುತ್ತಾರೆ. ಒಕ್ಕಲಿಗರ ಸರ್ಕಾರ ಬಿಜೆಪಿಯವರೇ ಬೀಳಿಸಿದ್ದಲ್ವ, ಅದನ್ನ ಕೇಳುವ ಶಕ್ತಿ ಸ್ವಾಮೀಜಿ ಅವರಿಗೆ ಇದೆಯೋ ಇಲ್ಲವೊ ನನಗೆ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ನಮ್ಮ ಅಭ್ಯರ್ಥಿಗಳು ಸ್ವಾಮೀಜಿಗಳ ಬಳಿ ಹೋಗಿದ್ದರು, ಇವತ್ತು ಅವರುಗಳು ಹೋಗಿದ್ದಾರೆ ಎನ್ನುತ್ತಲೇ ನಮ್ಮ ಒಕ್ಕಲಿಗ ಚೀಫ್ ಮಿನಿಸ್ಟರ್ ಇಳಿಸಿದ್ರಲ್ಲ ಅದನ್ನ ಕೇಳುವ ಶಕ್ತಿ ಸ್ವಾಮೀಜಿಗೆ ಇದ್ಯೋ ಇಲ್ವೋ ಗೊತ್ತಿಲ್ಲ, ಜೊತೆಗೆ ಯಾವುದನ್ನೂ ಮುಚ್ಚಿಡೋದಕ್ಕೆ ಆಗಲ್ವಲ್ಲಾ ಎಂದು ಪ್ರಶ್ನಿಸಿದರು.

ಇದೇ ವೇಳೆ ಬಾಡೂಟ ಹಾಕಿಸಿದ್ದಾರೆಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಊಟ ಕೊಟ್ಟಿದ್ದಕ್ಕೆ ದೂರು ಕೊಡಿಸಿದ್ರು. 500 ಜನರಿಗೆ ನಾವು ಪರ್ಮಿಷನ್ ಪಡೆದಿದ್ದೆವು ಈಗ ಅವರೂ ಬಾಡೂಟ ಕೊಡೋಕೆ ಹೊರಟಿದ್ದಾರೆ, ಬಿಡಿ ಈಗ ಅದೆಲ್ಲಾ ಯಾಕೆ ಮುಂದೆ ಮಾತನಾಡೋಣ ಎಂದು ಹೇಳಿದರು.

ನಾನು ಗಿಫ್ಟ್ ವೋಚರ್ ಹಂಚುತ್ತೇವೊ,ಇಲ್ಲಾ ಬಾಡೂಟ ಹಾಕ್ತೆವೋ ಗೊತ್ತಿಲ್ಲ ಆದರೆ ನಾವು ನಾಲ್ಕು ಕ್ಷೇತ್ರ ಗೆಲ್ತೇವೆ. ಹಾಸನ, ಮಂಡ್ಯ, ಬೆಂ.ಗ್ರಾಮಾಂತರ, ಕೋಲಾರ ಗೆದ್ದೇ ಗೆಲ್ತೇವೆ ನೋಡ್ತಾ ಇರಿ ಎಂದು ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.